logo

ಶಿರಾದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಬುಕ್ಕಾಪಟ್ಟಣದಲ್ಲಿ ಪೂರ್ವಭಾವಿ ಸಭೆ

ಶಿರಾ: ಅಕ್ಟೋಬರ್ 18ರಂದು ಶಿರಾ ನಗರದಲ್ಲಿ ನಡೆಯಲಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದ ಅಂಗವಾಗಿ ಹೋಬಳಿ ಮಟ್ಟದ ಪೂರ್ವಭಾವಿ ಸಭೆಯನ್ನು ಬುಕ್ಕಾಪಟ್ಟಣದ ಶ್ರೀ ಉದ್ಭವ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಸಮುದಾಯದ ಮುಖಂಡರು ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಶಿವು ಜಾನ್ಕಲ್, ಕುಂಬಾರಳ್ಳಿ ಗಂಗಾಧರ್, ಮುಕುಂದಪ್ಪ, ನರಸಿಂಹಣ್ಣ, ದಯಾನಂದ್ ಹೊಸಪಾಳ್ಯ, ಶ್ರೀರಂಗ ಮಾದೇನಹಳ್ಳಿ, ರಾಜಣ್ಣ ಬುಕ್ಕಾಪಟ್ಟಣ, ಪ್ರಕಾಶ್ ಕುಂಬಾರಹಳ್ಳಿ, ಲಕ್ಷ್ಮಣ ಕರೆಮದಲ್ಲಿ, ರವಿಕುಮಾರ್ ಜಾಣಕಲ್, ಶೇಖರ್, ವಿಜಿ, ರಮೇಶ್, ಪುಟ್ಟರಾಜು, ತಿಪ್ಪೇಸ್ವಾಮಿ, ಮುದ್ರಾಜು, ಜಗನಾಥ ಬುಕ್ಕಾಪಟ್ಟಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಧರಣಿ ಕುಮಾರ್ ಹಾಗೂ ರಂಗರಾಜು ಸಭೆಗೆ ವಿಶೇಷವಾಗಿ ಹಾಜರಿದ್ದರು.

54
2440 views