logo

ಹುಕ್ಕೇರಿ :- ಬೆಳಗಾವಿ ಜಿಲ್ಲೆಗೆ ಹೈ ವೋಲ್ಟೇಜ್ ಕರೆಂಟ್ ಪಾಸ್ ಮಾಡಿದ ರಮೇಶ ಕತ್ತಿ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೋಲ್ಲೆ ಫೇನಲ್ ಗೆ ಸೋಲಿನ ರುಚಿ ತೋರಿಸಿ AB ಪಾಟೀಲ ಮತ್ತು ಕತ್ತಿಯವರ ಸ್ವಾಭಿಮಾನ ಪೆನಲ್ ದಿಗ್ವಿಜಯ ಸಾಧಿಸಿದೆ.

ರಮೇಶ್ ಕತ್ತಿ ಹಾಗೂ ಜೋಲ್ಲೆ + ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಮಹಾ ಯುದ್ಧದಲ್ಲಿ ರಮೇಶ್ ಕತ್ತಿ ಅವರು ತಮ್ಮ ತಂತ್ರಗಾರಿಕೆಯಿಂದ ಹುಕ್ಕೇರಿ ಸರ್ವ ಜನರ ಮನಸ್ಸನ್ನು ಗೆದ್ದು ವಿರೋಧಿ ಬಣಕ್ಕೆ, ಇನ್ನೂ ಮುಂದೆ ಗೋಕಾಕ್, ಅರಭಾವಿ, ಹುಕ್ಕೇರಿ ಕ್ಷೇತ್ರಕ್ಕೆ ಬರುತ್ತೆನೆಂದು ಹೇಳುವ ಮೂಲಕ ಸಂತಸ ವ್ಯಕ್ತ ಪಡಿಸಿದರು.

ಇನ್ನೂ ಮಹಿಳಾ ಮೀಸಲು 2 ಸ್ಥಾನಗಳಲ್ಲಿ, ಹಿಂದುಳಿದ ಅ ವರ್ಗದ ಮೀಸಲು ಕ್ಷೇತ್ರ ಒಂದು,ಬ ವರ್ಗ ಒಂದು ಪರಿಶಿಷ್ಟ ಒಂದು ಸ್ಥಾನ, ಪರಿಶಿಷ್ಟ ಪಂಗಡ ಒಂದು ಸ್ಥಾನ ಗಳಲ್ಲಿ ರಮೇಶ ಕತ್ತಿ ಮತ್ತು AB ಪಾಟೀಲ ಪೆನೆಲ್ ಗೆದ್ದು ಬಿಗಿದೆ.

ಹುಕ್ಕೇರಿ ವಿದ್ಯುತ್‌ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನಗಳನ್ನೂ ಗೆದ್ದುಕೊಂಡಿದೆ. ಈ ಮೂಲಕ ಹುಕ್ಕೇರಿ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹಣದ ಮುಂದೆ ನಡೆಯದ ದುಡ್ಡಿನ ಆಟ ಅಂತಾ ತೋರಿಸಿ ಕೊಟ್ಟ ರಮೇಶ ಕತ್ತಿ, ನಿಖಿಲ ಕತ್ತಿ ಮತ್ತು ಎ.ಬಿ.ಪಾಟೀಲ ಜೋಡಿ ಕಮಾಲ್ ಮಾಡಿ ಹೈ ವೋಲ್ಟೇಜ್ ವಿದ್ಯುತ್ ಶಾಕ್ ಕೊಟ್ಟಿದೆ.

71
4764 views