“ಗೋಕಾಕ ನೂತನ ಜಿಲ್ಲೆ ಘೋಷಣೆ ಆಗದಿದ್ದರೆ ಧರಣಿ'
“ಗೋಕಾಕ ನೂತನ ಜಿಲ್ಲೆ ಘೋಷಣೆ ಆಗದಿದ್ದರೆ ಧರಣಿ'ಗೋಕಾಕ: ನವೆಂಬರ್ 1ರೊಳಗೆ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡದೇ ಹೋದರೆ ನವೆಂಬರ್ 2ರಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರವೇ ರಚಿಸಿದ ಆಯೋಗಗಳು ಈಗಾಗಲೇಗೋಕಾಕ ಜಿಲ್ಲೆಯಾಗಲು ಸೂಕ್ತ ಎಂದು ಹೇಳಿದ್ದರೂ ಇಲ್ಲಿಯವರೆಗೆ ಆಗಿಲ್ಲ. ರಾಜಕೀಯ ಹಿತಾಸಕ್ತಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ದೂರಿದರು.'ಕೇಂದ್ರ ಸರ್ಕಾರದನಿರ್ದೇಶನದಂತೆ ಬರುವ ಡಿಸೆಂಬರ್31ರೊಳಗೆ ರಾಜ್ಯ ಸರ್ಕಾರಗಳುಗಡಿ ಪ್ರದೇಶಗಳನ್ನು ವಿಗಂಡಣೆಮಾಡಬೇಕು. ಇಲ್ಲದಿದ್ದರೆ ಮುಂದಿನ 3ವರ್ಷಗಳ ಕಾಲ ಯಾವುದೇ ಭೂ ಪ್ರದೇಶಗಳನ್ನು ವಿಭಜಿಸುವ ಹಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ ಪಡೆದು ಜಿಲ್ಲೆ ವಿಭಜನೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು' ಎಂದು ಒತ್ತಾಯಿಸಿದರು.ವಿಶ್ರಾಂತ ಪ್ರಾಚಾರ್ಯಅರ್ಜುನ್ ಪಂಗಣ್ಣವರ, ಸಂಜೀವಪೂಜಾರಿ, ಬಾಳಯ್ಯ ಕಂಬಿ,ಸದಾಕತಅಲಿ ಮಕಾನದಾರ, ಪ್ರವೀಣ=ನಾಯಿಕ, ಮಲ್ಲಪ್ಪ ಜಟ್ಟೆನ್ನವರ,ಲಿಂಗಪ್ಪ ಅಮಿನಭಾವಿಇದ್ದರು.