ಆಕಾಶ್ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜೆ
ದೇವನಹಳ್ಳಿ: ನಮ್ಮ ಮಕ್ಕಳಿಗೆ ಶಾಲಾ ಹಂತ ದಿಂದಲೇ ಮೈಸೂರು ದಸರಾದ ಇತಿಹಾಸವನ್ನು ತಿಳಿಸಿಕೊಡಬೇಕು ಎಂದು ಆಕಾಶ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುನಿರಾಜು ತಿಳಿಸಿದರು.
ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿದರು. ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ದಸರಾ ಸಂದರ್ಭದಲ್ಲಿ ಆರಾಧಿಸುತ್ತೇವೆ. ಶಕ್ತಿ ದೇವತೆಗಳಿಗೆ ಪೂಜೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿ ಯೊಂದು ವಾಹನ ಮತ್ತು ಆಯುಧಗಳಿಗೆ ಪೂಜೆ ಸಲ್ಲಿಸುತ್ತೇವೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹೆಚ್ಚು ಮಾಡಿದಾಗ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್‌ಗೌಡ, ನಿರ್ದೇಶಕ ಆಕಾಶ್, ಕೃತಿಕಾ ಅಮರ್‌ಗೌಡ, ಕೀರ್ತನಾ ಆಕಾಶ್, ಪ್ರಾಂಶುಪಾಲರು, ವೈದ್ಯಾಧಿಕಾರಿ ಗಳು, ವಿದ್ಯಾರ್ಥಿಗಳು ಇದ್ದರು.
ವರದಿ ಹೈದರ್ ಸಾಬ್