logo

ವಿಜಯಪುರ ಜಿಲ್ಲಾ ಪೊಲೀಸ್ ಸುದ್ದಿ: ‘ ಮನೆ-ಮನೆಗೆ ಪೊಲೀಸ್ ‘ ಸುಕೂನ್ ಹಾಗು ಸನ್ ಸಿಟಿ ಯಲ್ಲಿ ಅರಿವು ಮೂಡಿಸಲಾಯಿತು :

ಇಂದು ನಗರದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವತಿ ಇಂದ
‘ ಮನೆ-ಮನೆಗೆ ಪೊಲೀಸ್’ ಅರಿವು ಕಾರ್ಯಕ್ರಮ ನಡೆಸಲಾಯಿತು: ಆದರ್ಶ ನಗರ ಪೊಲೀಸ್ ಸಿಬ್ಬಂದಿ ಗಳಿಂದ
ಅರಿವು ಮೂಡಿಸಲಾಯಿತು :
ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಉಪಕ್ರಮ

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಉಂಟು ಮಾಡುವುದು ಪೊಲೀಸರ ಪ್ರಮುಖ ಕರ್ತವ್ಯವಾಗಿದೆ. ಪ್ರಸ್ತುತ ಪೊಲೀಸ್ ವ್ಯವಸ್ಥೆಯು ಬಹುತೇಕವಾಗಿ "ಪ್ರತಿಕ್ರಿಯೆ ಸೇವೆ" ಯನ್ನು ಮಾತ್ರವೇ ಒದಗಿಸುತ್ತಾ ಬಂದಿದೆ, ಅಂದರೆ ಸಾರ್ವಜನಿಕರು ನೀಡುವ ದೂರುಗಳ/ಅಹವಾಲುಗಳ ಆಧಾರದ ಮೇಲೆ ಪ್ರತಿಕ್ರಿಯಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆಯನ್ನು ಸಕ್ರಿಯ ಸೇವೆ" ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇಂತಹ ನಡೆಯಿಂದ ಪೊಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಹೆಚ್ಚುವುದರೊಂದಿಗೆ, ಜನರು ಮತ್ತು ಪೊಲೀಸರು ನಿಕಟ ಸಂಬಂಧದ ಪರಿಣಾಮವಾಗಿ, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೆ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪಗೊಳ್ಳುತ್ತದೆ. ಈ ವಿನೂತನ ಮತ್ತು ಸಮಾಜಮುಖ ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷಗಳು ಈ ಕೆಳಗಿನಂತೆ ಇರುತ್ತವೆ.

* ಮನೆ ಮನೆಗೆ ಪೊಲೀಸ್ ಉಪಕ್ರಮದ ಮೂಲಕ ಪೊಲೀಸ್-ಸಾರ್ವಜನಿಕರ ಮಧ್ಯೆ ಸಂಪರ್ಕ ಮತ್ತು ಸಂಬಂಧ ವೃದ್ಧಿ * ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರ ನಡುವೆ ನೇರ ಸಂಪರ್ಕ ಮತ್ತು ಸಂವಹನ ಸ್ಥಾಪಿಸುವುದು.

ಮನೆಗಳಿಗೆ ಭೇಟಿ ನೀಡಿದಾಗ ಪೊಲೀಸರು ಸಾರ್ವಜನಿಕರಿಂದ ಅಹವಾಲುಗಳನ್ನು ಲಿಖಿತವಾಗಿ ಹಾಗೂ ಮೌಖಿಕವಾಗಿ ಆಲಿಸಿ ತಕ್ಷಣ ಸ್ಪಂದಿಸಲಾಗುವುದು.

* ಸಿಬ್ಬಂದಿಗಳ ಅಧಿಕಾರ ವ್ಯಾಪ್ತಿಗೆ ಮೀರಿದ ಸಮಸ್ಯೆಗಳ ಬಗ್ಗೆ ಠಾಣಾಧಿಕಾರಿಗಳಿಗೆ ವರದಿ ನೀಡುತ್ತಾರೆ. ಅಂತಹ ಸಮಸ್ಯೆಗಳ ಬಗ್ಗೆ ಠಾಣಾಧಿಕಾರಿಗಳು ತಕ್ಷಣ ಸ್ಪಂದಿಸಲಾಗುವುದು.

* ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ 112 ಬಳಸುವಂತೆ ಅದರ ಬಗ್ಗೆ ತಿಳುವಳಿಕೆ ನೀಡಲಾಗುವುದು.

* ಪ್ರತಿ ತಿಂಗಳು ಎರಡನೇ ಶನಿವಾರದಂದು ಠಾಣಾ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಸಾರ್ವಜನಿಕ ಸಂಪರ್ಕ ಸಭೆಯನ್ನು ಏರ್ಪಡಿಸಲಾಗುವುದು.

* ಮನೆ ಮನೆಗೆ ಪೊಲೀಸ್ ಉಪಕ್ರಮದ ಭಾಗವಾಗಿ ಶಾಲಾ-ಕಾಲೇಜುಗಳಲ್ಲಿ ಕಾನೂನು ಮತ್ತು ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರಗಳು ಮತ್ತು ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು.

ಅಪರಾಧದದ ತಡೆಗೆ ಸಹಕಾರಿ - ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟಲಾಗುವುದು.

* ಸ್ಥಳೀಯ ಸಮಸ್ಯೆಗಳ ಪರಿಹಾರ - ಸಮುದಾಯ ಪೊಲೀಸ್ ವ್ಯವಸ್ಥೆಯ ಮೂಲಕ ಸ್ಥಳೀಯ ಮಟ್ಟದ ವಿಶೇಷ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು.

ಅಪರಾಧದ ಕುರಿತು ಜಾಗೃತಿ - ಸಾರ್ವಜನಿಕರಲ್ಲಿ ಕಾನೂನು ಮತ್ತು ಅಪರಾಧ ತಡೆ ಬಗ್ಗೆ ಅರಿವು ಮೂಡುತ್ತದೆ.

ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು

ಮನೆ ಲಾಕ್ ಮಾಡಿ ಹೋಗುವಾಗ ಹಣ ಮತ್ತು ಒಡವೆಗಳನ್ನು ಬ್ಯಾಂಕ್ ಲಾಕರ ಗಳಲ್ಲಿ ಇಟ್ಟು ಹೋಗುವುದು.

ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಪೊಲೀಸರೊಂದಿಗೆ ಹಂಚಿಕೊಳ್ಳುವುದು.

* ಪ್ರತಿ ಮನೆಗೂ ಮಹಿಳಾ ಸಿಬ್ಬಂದಿಗಳು ಭೇಟಿ ನೀಡುವುದರಿಂದ ಮಹಿಳೆಯರು ಮುಕ್ತವಾಗಿ ತಮ್ಮ ಯಾವುದೇ ಸಮಸ್ಯೆಗಳನ್ನು ಮಹಿಳಾ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಬಹುದು.

ಪಜಾ/ಪಪಂ ಜನಾಂಗದವರು ತಮ್ಮ ಕುಂದುಕೊರತೆಗಳನ್ನು ಪೊಲೀಸರೊಂದಿಗೆ ಚರ್ಚಿಸಬಹುದು.

'ಮನೆ ಮನೆಗೆ ಭೇಟಿ ಸಮಯದಲ್ಲಿ ಹಿರಿಯ ನಾಗರೀಕರು ಕೂಡಾ ತಮ್ಮ ಸಮಸ್ಯೆಗಳಿದ್ದಲ್ಲಿ ಪೊಲೀಸರ ಗಮನಕ್ಕೆ ತರುವುದು.

ಮನೆ ಮನೆಗೆ ಪೊಲೀಸ್ ಭೇಟಿ ಸಮಯದಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವುದು.
ಸಾರ್ವಜನಿಕರು ತಾವು ವಾಸಿಸುವ ಏರಿಯಾದಲ್ಲಿ ನಡೆಯುತ್ತಿರುವ ಅಕ್ರಮ/ಅಪರಾಧ ಚಟುವಟಿಕೆಗಳ ಬಗ್ಗೆ ಕೂಡಲೇ ಮಾಹಿತಿ ನೀಡುವುದು.

ಸಾರ್ವಜನಿಕರು ತಮ್ಮ ಮನೆಗಳ ಸುತ್ತ ಮುತ್ತ ಸುರಕ್ಷತೆ ಕುರಿತು ಸಿಸಿಟಿವಿ ಅಳವಡಿಸುವುದು.

ಸಾರ್ವಜನಿಕರು ಬೇರೆ ಊರಿಗೆ ಹೋಗುವಾಗ ಸಂಬಂಧಪಟ್ಟಿ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವುದು.

ಸಾರ್ವಜನಿಕರು ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಎಚ್ಚರದಿಂದ ಇದ್ದು, ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸುವುದು. *

ಸಾರ್ವಜನಿಕರು ಬೆಳಗಿನ ಜಾವದಲ್ಲಿ ವಾಯುವಿಹಾರಕ್ಕೆ ಹೋಗುವ ಸಮಯದಲ್ಲಿ ಬೆಲೆ ಬಾಳುವ ಆಭರಣಗಳನ್ನು ಧರಿಸಿಕೊಂಡು

ಬಂಗಾರದ ಆಭರಣಗಳನ್ನು ತೊಳೆದುಕೊಡುವೆನೆಂದು ಹೇಳಿಕೊಂಡು ಬರುವ ವಂಚಕರ ಬಗ್ಗೆ ಎಚ್ಚರಿಕೆಯಿಂದಿರುವುದು. ಮುಂದೆ ಗಲಾಟೆಯಾಗುತ್ತಿದೆ, ನಿಮ್ಮ ಮೈಮೇಲಿನ ಬಂಗಾರದ ಒಡವೆಗಳನ್ನು ಕಟ್ಟಿಕೊಡುತ್ತೇವೆ ಎಂದು ಹೇಳುವ ವಂಚಕರ ಬಗ್ಗೆ ఎడ్డరిశయందిరువుడు.

ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಒಂದು ಸಾಮಾಜಿಕ ಪಿಡುಗಾಗಿದ್ದು ಅದನ್ನು ತಡೆಗಟ್ಟಲು ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ತಿಳಿಸುವುದು ಹಾಗೂ ಕರ್ನಾಟಕ ಡ್ರಗ್ಸ್ ಫ್ರೀ ಆ್ಯಪ್ ನ್ನು ಅಳವಡಿಸಿಕೊಂಡು ಮಾಹಿತಿ ಹಂಚಿಕೊಳ್ಳುವುದು.

ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಬಾಲ್ಯ ವಿವಾಹ ನಿಷೇದಿಸಲಾಗಿದೆ. ಅಂತಹ ಮಾಹಿತಿಗಳು ಇದ್ದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ನೇದ್ದಕ್ಕೆ ಕರೆ ಮಾಡಿ ತಿಳಿಸುವುದು

ಸಾರ್ವಜನಿಕರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆಯ ಕಡೆಗೆ ಗಮನಹರಿಸುವುದು ಹಾಗೂ ತಮ್ಮ ವೈಯಕ್ತಿಕ ಮಾಹಿತಿ ಪೋಟೊ ವಿಡಿಯೋಗಳನ್ನು ಅನಾಮಧೇಯ ವ್ಯಕ್ತಿಗಳ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು.

ಸಾರ್ವಜನಿಕರು ರಸ್ತೆಯ ಮೇಲೆ ದ್ವೀಚಕ್ರವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲೈಟ್ ಧರಿಸುವುದು ಮತ್ತು ಕಾರಿನಲ್ಲಿ ಸಂಚರಿಸುವಾಗ ಸೀಟಬೆಲ್ಸ್ ಧರಿಸಿಕೊಂಡು ತಮ್ಮ ಮತ್ತು ತಮ್ಮೊಂದಿಗೆ ಸಂಚರಿಸುವ ತಮ್ಮ ಕುಟುಂಬದವರ ಜೀವ ರಕ್ಷಣೆ

ಮಾಡಿಕೊಳ್ಳುವುದು. ಅಲ್ಲದೇ ಇತರೇ ಸಂಚಾರಿ ನಿಯಮಗಳನ್ನು ಪಾಲಿಸುವುದು.

ಕರ್ನಾಟಕ ಪೊಲೀಸ್ ಇಲಾಖೆಯ KSP ಆ್ಯಪ್

ಕರ್ನಾಟಕ ಪೊಲೀಸ್ ಇಲಾಖೆಯ ksp ಆ್ಯಪ್‌ನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆದಿದ್ದು, ಇದರ ಮೂಲಕ ತಮಗೆ ಅತಿ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ ಮತ್ತು ಯಾವ ಠಾಣೆಯ ವ್ಯಾಪ್ತಿಯೊಳಗೆ ತಾವಿದ್ದಿರಿ ಎಂಬ ಮಾಹಿತಿಯನ್ನು ಪಡೆಯಬಹುದು.

ಯಾವುದಾದರು ಘಟನೆಗಳು ಸಂಭವಿಸಿದಲ್ಲಿ ಕೂಡಲೆ ಮಾಹಿತಿಯನ್ನು ಪೊಲೀಸ್ ಠಾಣೆಗೆ ತಿಳಿಸಬಹುದು.

ಈ ಆ್ಯಪ್‌ನಲ್ಲಿ ತುರ್ತಾಗಿ ಸಂಪರ್ಕಿಸಬಹುದಾದ ಸಹಾಯವಾಣಿಗಳ ಮಾಹಿತಿ ಲಭ್ಯವಿದ್ದು ಇದರ ಸದುಪಯೋಗ

ಪಡೆದುಕೊಳ್ಳಬಹುದು

e-Lost Report ಸಾರ್ವಜನಿಕರು ತಮ್ಮ ವಸ್ತುಗಳನ್ನು ಕಳೆದುಕೊಂಡಲ್ಲಿ ಈ ಆ್ಯಪ್‌ನ ಮೂಲಕ ವರದಿ ಮಾಡಬಹುದು.

KSP FACT CHECK ಆ್ಯಪ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ವದಂತಿಗಳ ಕುರಿತಾಗಿ ಸತ್ಯ ಸಂಗತಿ ಏನು ಎಂಬುದುರ ಮಾಹಿತಿ ಪಡೆದುಕೊಳ್ಳಬಹುದು.

POLICE MITRA APP ಮೂಲಕ ಟ್ರಾಪಿಕ್ ಸಮಸ್ಯೆ, ಸೈಬರ್ ವಂಚನೆಗೆ ಸಂಬಂದಿಸಿದಂತೆ, ತೊಂದರೆಗೊಳಗಾದಲ್ಲಿ ವರದಿ ಮಾಡಬಹುದು.

ಈ ರೀತಿ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿದಾಗ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಹೋಗಲು ಹಾಗೂ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಹಕಾರಿಯಾಗಿ ಸಧೃಢ ಸಮಾಜವನ್ನು ನಿರ್ಮಿಸಲು ಸಹಾಯವಾಗುವುದು.

ಮನೆ ಮನೆಗೆ ಪೊಲೀಸ್ ಸೇವೆಯ ಮೂಲಧೈಯ ಉದ್ದೇಶವು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುವುದು ಹಾಗೂ ಸಾರ್ವಜನಿಕರಲ್ಲಿ ಜನಸ್ನೇಹಿ ಪೊಲೀಸ್ ಕಾರ್ಯಗತ ಗೊಳಿಸುವುದಾಗಿದೆ.

ಸಾರ್ವಜನಿಕರಿಗೆ ತುರ್ತು ಸೇವೆಗಾಗಿ ಇರುವ ಸಹಾಯವಾಣಿಗಳ ವಿವರ

ಪೊಲೀಸ್ ಇಲಾಖೆಯ ERSS - 112

ಅಂಬ್ಯುಲೆನ್ಸ್ ಸೇವೆ: 108

ಸೈಬರ್ ಕ್ರೈಂ ಸಹಾಯವಾಣಿ : 1930

ಮಕ್ಕಳ ಸಹಾಯವಾಣಿ & ಬಾಲ್ಯ ವಿವಾಹ : 1098

ಆದರ್ಶನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ

: 08352-263333/9480804250

ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ : 08352-250751 (9480804200).


ಸುದ್ದಿ ಗಳ ಪ್ರಸಾರ ಕ್ಕಾಗಿ ಸಂಪರ್ಕಿಸಿ: RRK GROUP & MEDIA 9972928985
www.rrkgroup.in

ಜಾಹೀರಾತು : ಕೇವಲ 300 ರೂಪಾಯಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಗಳನ್ನು ಖರೀದಿ ಮಾಡಲು ಸಂಪರ್ಕಿಸಿ ಆರ್ ಆರ್ ಕೆ ಗ್ರೂಪ್ 9972928985 www.rrkgroup.in

10
514 views