logo

ಬಿಐಎಎಲ್-ಎನೇಬಲ್‌ ಇಂಡಿಯಾ ಸಹಯೋಗದಲ್ಲಿ ಅಂತರ್ಗತ ಪ್ರಯಾಣ, ಸಮಗ್ರ ಚಲನಶೀಲತೆಯನ್ನು ರೂಪಿಸಲು ಶೃಂಗಸಭೆ

ಬೆಂಗಳೂರು,: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಮತ್ತು ಎನೇಬಲ್ ಇಂಡಿಯಾ (EnAble India) ಸಹಯೋಗದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಓಪನ್ ಸ್ಕೈ, ಓಪನ್ ಮೈಂಡ್ (OSOM) ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ 2025' ಕಾರ್ಯಕ್ರಮದಲ್ಲಿ ಸಮಗ್ರ ಪ್ರಯಾಣ ಮತ್ತು ವಿನ್ಯಾಸಕ್ಕಾಗಿ ಹೊಸ ಮಾದರಿಗಳನ್ನು ಅನಾವರಣಗೊಳಿಸಿತು.

ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು, ಉದಯೋನ್ಮುಖ ಸಂಸ್ಥೆಗಳು, ಜಾಗತಿಕ ನವೋದ್ಯಮಿಗಳು, ಮತ್ತು ಬದಲಾವಣೆಯ ರೂವಾರಿಗಳಾದ ವಿಶೇಷ ಚೇತನರನ್ನು ಒಳಗೊಂಡಿದ್ದ ಕಾರ್ಯಕ್ರಮವು ಸಮಗ್ರ ಚಲನಶೀಲತೆಯನ್ನು ಭಾರತ ಮತ್ತು ವಿಶ್ವದಲ್ಲಿ ಮರುರೂಪಿಸಲು ಯಶಸ್ವಿ ವೇದಿಕೆ ಒದಗಿಸಲು ಯಶಸ್ವಿಯಾಯಿತು. ದಿವ್ಯಾಂಗತೆಯ ಹೊರತಾಗಿಯೂ, ಪ್ರತಿಯೊಬ್ಬ ವ್ಯಕ್ತಿಯು ಗೌರವ ಮತ್ತು ಸ್ವಾತಂತ್ರ್ಯದೊಂದಿಗೆ ಜಗತ್ತಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ವಿಮಾನ ನಿಲ್ದಾಣಗಳು, ತಂತ್ರಜ್ಞಾನ ಮತ್ತು ಸಾರ್ವತ್ರಿಕ ವಿನ್ಯಾಸ ಮಾದರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಪ್ರದರ್ಶಿಸಿತು.


ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಅವರು ಮಾತನಾಡಿ, “ವಿಮಾನ ನಿಲ್ದಾಣವು ಜಗತ್ತಿನ ವೈವಿಧ್ಯತೆಯನ್ನು ಪ್ರತಿಬಿಂಬಿಸುವ, ಎಲ್ಲರಿಗೂ ಪ್ರವೇಶ ನೀಡುವ ಸ್ಥಳ ಎಂಬ ನಂಬಿಕೆಯನ್ನು ಬಿಎಐಎಲ್‌ ಹೊಂದಿದೆ. ಇಲ್ಲಿ ಉದ್ಯೋಗಿಗಳು, ಪ್ರಯಾಣಿಕರು, ನವೋದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಎನೇಬಲ್ ಇಂಡಿಯಾ ಮುಂತಾದ ಸಂಸ್ಥೆಗಳು ಸೇರಿ ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುತ್ತಾರೆ. ಈ ಆಲೋಚನೆಗಳು ಸಾಕಾರಗೊಂಡು, ಬೆಂಗಳೂರು ವಿಮಾನ ನಿಲ್ದಾಣದ ಅನುಭವವನ್ನು ಸುಧಾರಿಸುವುದಷ್ಟೇ ಅಲ್ಲದೇ, ಜಾಗತಿಕ ವಿಮಾನ ನಿಲ್ದಾಣಗಳಲ್ಲಿಯೂ ಪ್ರವೇಶ ಮಾನ್ಯತೆಯ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಎಲ್ಲರನ್ನೂ ಒಳಗೊಂಡು, ಎಲ್ಲರಿಗೂ ಪ್ರವೇಶ ಮಾನ್ಯತೆಯು ಹೆಚ್ಚಾದಾಗ, ಭಿನ್ನ ಸಾಮರ್ಥ್ಯಗಳಿರುವ ಜನರಿಗೆ ಜಗತ್ತು ತೆರೆಯುತ್ತದೆ. ಅವರು ಎಲ್ಲರ ಜೊತೆಗೆ ಪ್ರಯಾಣಿಸಬಹುದು, ಸಂಪರ್ಕಿಸಬಹುದು, ಕೆಲಸ ಮಾಡಬಹುದು ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು” ಎಂದು ತಿಳಿಸಿದರು.

ಎನೇಬಲ್ ಇಂಡಿಯಾದ ಸಹ-ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪೇಶ್ ಸುತರಿಯಾ ಅವರು ಮಾತನಾಡಿ,
“ವಿಶೇಷ ಚೇತನರು ಸಹ ಇತರರಂತೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೊಡುಗೆ ನೀಡುತ್ತಾರೆ. ಸೃಜನಶೀಲ ವ್ಯಕ್ತಿಗಳು, ಗ್ರಾಹಕರು, ವಿಶೇಷ ಚೇತನರಿಗಾಗಿ ಕೆಲಸ ಮಾಡುತ್ತಿರುವವರು ಎಲ್ಲರೂ ಈ ಸಮಾವೇಶಕ್ಕೆ ಕೊಡುಗೆ ನೀಡಿದ್ದಾರೆ. ಒಎಸ್‌ಒಎಂ 2025 ತಂತ್ರಜ್ಞಾನ, ವಿನ್ಯಾಸ ಮತ್ತು ಮಾನವಿಯ ಉದ್ದೇಶಗಳು ಒಟ್ಟಿಗೆ ಸೇರಿದಾಗ ಎಲ್ಲರಿಗೂ ಪ್ರಯೋಜನವಾಗುವ ಪರಿಹಾರಗಳು ನಿರ್ಮಾಣವಾಗುತ್ತವೆ ಎಂಬುದನ್ನು ತೋರಿಸುತ್ತದೆ. ಬಿಎಐಎಲ್ ಜೊತೆಗೆ ನಮ್ಮ ಸಹಭಾಗಿತ್ವ ಸಮಾವೇಶವು ನಾವೀನ್ಯತೆ ಮತ್ತು ಸಹಾನುಭೂತಿಯನ್ನು ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಇದು ಲಾಭ ಮತ್ತು ಉದ್ದೇಶವು ಒಂದಾಗುವ ಪರ್ಪಲ್ ಎಕಾನಮಿಯ ನೀಲನಕ್ಷೆಯಾಗಿದೆ” ಎಂದು ತಿಳಿಸಿದರು.

ಈ ಕಾರ್ಯಕ್ರಮವು ಬಿಐಎಎಲ್‌, ಎನೇಬಲ್‌ ಇಂಡಿಯಾ, ಸ್ಟಾರ್ಟ್‌ಅಪ್‌ಗಳು ಮತ್ತು ಮೂಲ ನವೋದ್ಯಮಿಗಳ ಸಹಕಾರವನ್ನು ವಿಕಸಿತ ಭಾರತ 2047ರ ದಿಕ್ಕಿನಲ್ಲಿ ದೇಶದಲ್ಲಿ ರೂಪುಗೊಳ್ಳಬೇಕಾದ ಸೂಕ್ತ ಮಾದರಿಯಾಗಿ ಪ್ರಸ್ತುತಪಡಿಸಿತು. ಪ್ರವೇಶ ಮಾನ್ಯತೆಯ ಮೂಲಸೌಕರ್ಯವು ಆರ್ಥಿಕತೆ ಮತ್ತು ದೈನಂದಿನ ಅನುಭವಗಳಲ್ಲೇ ಅಳವಡಿಸಲ್ಪಡುವ ಮಹತ್ವವನ್ನು ಶೃಂಗಸಭೆಯು ಸಾರಿತು.

ಈ ವರ್ಷದ ಆವೃತ್ತಿಯಲ್ಲಿ ತಳಮಟ್ಟದ ಪ್ರವೇಶ ಮಾನ್ಯತೆಯ ಹೊಸ ಆವಿಷ್ಕಾರಗಳ ಪ್ರದರ್ಶನ, ಸ್ಟಾರ್ಟ್‌ಅಪ್ ಮ್ಯಾಚ್‌ಮೇಕಿಂಗ್ ಫೋರಂ, ವಿಶೇ಼ ಚೇತನ ಮಾದರಿಗಳಿಂದ ನಡೆಸಲ್ಪಟ್ಟ ಹೈ-ಇಂಪ್ಯಾಕ್ಟ್ ಫ್ಯಾಷನ್ ಶೋ, ಮತ್ತು ಭಾರತದಲ್ಲಿ ವಿಶೇಷ ಚೇತನರ ಪ್ರವೇಶ ಮಾನ್ಯತೆಯನ್ನು ಹೆಚ್ಚಿಸುತ್ತಿರುವ ನವೋದ್ಯಮಿಗಳನ್ನು ಗೌರವಿಸುವ ಪ್ರಶಸ್ತಿ ಸಮಾರಂಭವನ್ನು ಒಳಗೊಂಡಿತ್ತು. ಜೀರೋ ಪ್ರಾಜೆಕ್ಟ್‌ ಟೆಕ್‌ ಫೋರಂ ಮತ್ತು ಜಾಗತಿಕ ವಿಶೇಷ ಚೇತನರ ಚಳವಳಿಯ ನಾಯಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಯಮಿಗಳು, ನವೋದ್ಯಮಿಗಳು, ಸೃಜನಾತ್ಮಕ ವೃತ್ತಿಪರರು ಮತ್ತು ವಿಕಲಚೇತನ ಸ್ಥಾಪಕರು ತಮ್ಮ ಜೀವನ ಪಯಣ ಮತ್ತು ನವೋದ್ಯಮಗಳನ್ನೂ ಹಂಚಿಕೊಂಡ ಮಾನವೀಯ ಕಥೆಗಳ ಪ್ರದರ್ಶನವು ಕಾರ್ಯಕ್ರಮದಲ್ಲಿ ಮನಸೂರೆಗೊಂಡಿತು.

43
1621 views