ಆತ್ಮೀಯ ಪೋಷಕರೇ ಗಮನಿಸಿ.
ಈ ಮಾಹಿತಿಯನ್ನು ಪ್ರತಿದಿನ ಕನಿಷ್ಠ ಒಂದು ಭಾರಿ ಆದರೂ ಓದಲೇಬೇಕು.
🙏ಎಚ್ಚರ ವಹಿಸುವುದು ಅಗತ್ಯ. 🙏
*ತಂದೆ ತಾಯಿಗಳಿಗೆ* ಕೈ ಮುಗಿದು ನಮಸ್ಕರಿಸಿ ಮಾಡುತ್ತಿರುವ ವಿನಂತಿ ಏನೆಂದರೆ.....
*ಶಿಸ್ತಿಗೆ* ಪರ್ಯಾಯ ಹೆಸರಾಗಿ ಖ್ಯಾತಿಯುಳ್ಳ ಶಾಲೆಗಳಲ್ಲಿ ವಿದ್ಯಾರ್ಥಿಗಳ *ಹೇರ್ ಸ್ಟೈಲ್, ನಡೆ ನುಡಿ* ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ, ಶಿಕ್ಷಕರು ನೋಡುತ್ತಾ, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ತಂದೆ ತಾಯಿಗಳಿಗೆ ಮಕ್ಕಳ ಮೇಲಿನ *ಗಮನ, ನಿಯಂತ್ರಣ,* ಕಡಿಮೆಯಾಗಿದ್ದರ ಪರಿಣಾಮ ಈ ರೀತಿ ಬೆಳೆದು ಬರುತ್ತಿದ್ದಾರೆ,
ಮಕ್ಕಳಿಗೆ ಕೇವಲ ಶಿಸ್ತು ಮಾತುಗಳಿಂದ ಹೇಳಿದರೆ ತಿಳುವಳಿಕೆ ಬಾರದು, ಸ್ವಲ್ಪ ಮಟ್ಟಿಗೆ *ಶಿಕ್ಷೆ, ಭಯ, ಭಕ್ತಿಯಿಂದ* ಮಾತ್ರ ಬದಲಾವಣೆ ಸಾಧ್ಯ,
ಮಕ್ಕಳಿಗೆ ಶಾಲೆಯಲ್ಲಿ ಭಯವಿಲ್ಲ,
ಮನೆಗೆ ಹೋದರೂ ಭಯವಿಲ್ಲ,
ಆದ್ದರಿಂದಲೇ ಸಮಾಜ ಇಂದು ಭಯಭೀತವಾಗುತ್ತಿದೆ. ಆ ಹುಡುಗರೆ ಇಂದಿನ ರೌಡಿಗಳಾಗಿ, ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅವರ ನಡವಳಿಕೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ನಂತರ ಪೋಲಿಸರ ಕೈಗೆ ಸಿಕ್ಕಿ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ,
ಇಂದಿನ ಪೋಷಕರು *ಹೊಡಿಬೇಡಿ, ಬೈ ಬೇಡಿ,* ಶಾಲೆಗೆ ಬಾರದವನನ್ನು ಯಾಕೆ ಬರುವುದಿಲ್ಲ ಎಂದು ಕೇಳಬೇಡಿ! ಎನ್ನುತ್ತಿದ್ದಾರೆ, ಹೀಗಾದರೆ *ಓದಲು, ಬರೆಯಲು, ಸಂಸ್ಕಾರ ಬರಲು* ಹೇಗೆ ಸಾಧ್ಯ,
ಐದನೇ ತರಗತಿಯಿಂದಲೇ *ವಿಚಿತ್ರ ಹೇರ್ ಸ್ಟೈಲ್, ಕತ್ತರಿಸಿದ ಜೀನ್ಸ್ ಪ್ಯಾಂಟ್,* ಗೋಡೆಗಳ ಮೇಲೆ, ಕಟ್ಟೆಗಳ ಮೇಲೆ, ಕುಳಿತು ಹೋಗುವವರನ್ನು ಬರುವವರನ್ನು ಟೀಕೆ ಮಾಡುವ ಹವ್ಯಾಸ, ಗುರುಗಳು ಬರುತ್ತಿದ್ದಾರೆ! ಎಂದು ಹೇಳಿದರೆ *ಬಂದರೆ ಬರಲಿ* ಎನ್ನುವ ಮನಸ್ಥಿತಿ ಇದೆ,
ಕೆಲವು ಪೋಷಕರು ನಮ್ಮ ಮಗು ಓದದಿದ್ದರೂ ಪರವಾಗಿಲ್ಲ, ಆದರೆ ಶಿಕ್ಷಕರು ಹೊಡೆಯಬಾರದು, ಎಂದು ಹೇಳುತ್ತಿರುವುದು ಸಮಾಜದ ದುರಂತವೆ ಸರಿ, ಯಾರು ನಿಮ್ಮ ಕೂದಲು ಕಟ್ ಮಾಡಿಸಿದ್ದು ಎಂದು ಕೇಳಿದರೆ *ನಮ್ಮ ಅಪ್ಪ ಸರ್* ಎಂಬ ಉತ್ತರ ನೀಡುತ್ತಾರೆ ಮಕ್ಕಳು,
ಶಾಲೆಯಲ್ಲಿ ತಪ್ಪು ಮಾಡಿದರೂ *ಶಿಕ್ಷೆ ಕೊಡಬಾರದು, ಬೈ ಬಾರದು, ಕನಿಷ್ಠ ಪಕ್ಷ ಗಂಭೀರವಾಗಿ ಮನದಟ್ಟು ಮಾಡಬಾರದು,* ಸ್ನೇಹ ಪೂರ್ವಕವಾಗಿ ಹೇಳಬೇಕು ಎಂದು ಈಗಿನ ಪೋಷಕರು ಪ್ರತಿಪಾದಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ.
ದಂಡನೆಯಿಲ್ಲದ ಶಿಕ್ಷಣ ಫಲಕಾರಿಯಾಗುವುದೇ?
ಸಮಾಜ ಕೂಡ ಹಾಗೆ ಮಾಡುತ್ತದೆಯೇ?
ಮೊದಲ ಬಾರಿಗೆ ತಪ್ಪು ಮಾಡಿದನೆಂದು ಕ್ಷಮಿಸುತ್ತದೆಯೇ?
ಶಿಕ್ಷಕರ ಹಕ್ಕುಗಳು ಈಗ ಇಲ್ಲ, ಮಕ್ಕಳನ್ನು ಸರಿ ದಾರಿಗೆ ತರಲು ಶಿಕ್ಷಕರು ನೇರವಾಗಿ ದಂಡಿಸಿದರೆ ಅದು ಅಪರಾಧ, ಅದೇ ಹುಡುಗ ದೊಡ್ಡವನಾದಾಗ ತಪ್ಪು ಮಾಡಿದರೆ *ಜೈಲು ಶಿಕ್ಷೆ, ಮರಣ ಶಿಕ್ಷೆ*
*ಪೋಷಕರೆ ಗಮನಿಸಿ:-*
ಮಕ್ಕಳ ವರ್ತನೆಯನ್ನು ಬದಲಾಯಿಸಲು ಶಿಕ್ಷಕರು ಮುಖ್ಯ ಪಾತ್ರವಹಿಸುತ್ತಾರೆ, *ಕೆಲವು ಶಿಕ್ಷಕರ ತಪ್ಪಿಗಾಗಿ ಎಲ್ಲಾ ಶಿಕ್ಷಕರನ್ನು ಅಪಮಾನಿಸಬೇಡಿ,* ಪ್ರತಿ ಸಣ್ಣ ತಪ್ಪಿಗೂ ಶಿಕ್ಷಕರ ಮೇಲೆ ಆರೋಪ ಮಾಡಬೇಡಿ,
90% ಶಿಕ್ಷಕರು ಮಕ್ಕಳ ಭವಿಷ್ಯವನ್ನು ಬಯಸುತ್ತಾರೆ, ನಾವು ಓದುತ್ತಿದ್ದಾಗ ಕೆಲವು ಶಿಕ್ಷಕರು ನಮ್ಮನ್ನು ಹೊಡೆದಿದ್ದಾರೆ,ಆದರೆ ನಮ್ಮ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ಪ್ರಶ್ನೆ ಮಾಡಲಿಲ್ಲ, ಅವರು ನಮ್ಮ ಕಲ್ಯಾಣವನ್ನು ಮಾತ್ರ ಗಮನಿಸುತ್ತಿದ್ದರು,
ಮೊದಲು ಪೋಷಕರು ಗುರುವಿನ ಮಹತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ಮಾಡಬೇಕು, ಮಕ್ಕಳ ಭ್ರಷ್ಟತೆಯ 60% ರಷ್ಟು ಕಾರಣ ಸ್ನೇಹಿತರು, ಮೊಬೈಲ್, ಮೀಡಿಯಾ, ಇನ್ನು ಉಳಿದ 40% ಪೋಷಕರು, ಅತಿಯಾದ ಮಮತೆ, ಅಜ್ಞಾನ, ಮೂಢನಂಬಿಕೆ, ಮಕ್ಕಳಿಗೆ ಹಾನಿ ಮಾಡುತ್ತವೆ,
*ಇಂದಿನ 70% ಮಕ್ಕಳು*:-
👉ಪೋಷಕರು ಕಾರು, ಬೈಕ್, ಶುಚಿ ಗೊಳಿಸಿ ಎಂದರೆ ತೊಳೆಯುವುದಿಲ್ಲ,
👉ಪಾನೀಯ ತರಲು ಅಂಗಡಿಗೆ ಹೋಗಿ ಬರಲು ಸಿದ್ದರಿಲ್ಲ,
👉ಶಾಲಾ ಪೆನ್, ಬ್ಯಾಗ್ ಸರಿಯಾಗಿ ಇಡುವುದಿಲ್ಲ,
👉ಮನೆಗೆ ಸಹಾಯ ಮಾಡಲು ಉತ್ಸಾಹವಿಲ್ಲ,
👉ರಾತ್ರಿ 10 ರೊಳಗೆ ಮಲಗುವುದಿಲ್ಲ, ಬೆಳಿಗ್ಗೆ 6 ರಿಂದ 7 ರೊಳಗೆ ಎಳುವುದಿಲ್ಲ,
👉ಗಂಭೀರವಾಗಿ ಮಾತನಾಡಿದರೆ ಎದುರಿಸುತ್ತಾರೆ,
👉ಬೈದರೆ ವಸ್ತುಗಳನ್ನು ಎಸೆದು ಬಿಡುತ್ತಾರೆ,
👉ಹಣ ಕೊಟ್ಟರೆ ದುರುಪಯೋಗ ( ಅನಾರೋಗ್ಯಕರ ತಿಂಡಿ ತಿನಿಸುಗಳನ್ನು) ತಿನ್ನುತ್ತಾರೆ,
👉ಅಪ್ರಾಪ್ತ ಮಕ್ಕಳು ಬೈಕ್ ಓಡಿಸುತ್ತಾರೆ, ಅಪಘಾತಕ್ಕೀಡಾಗುತ್ತಾರೆ, ಕೇಸಿನಲ್ಲಿ ಸಿಕ್ಕಿ ಬೀಳುತ್ತಾರೆ,
👉ಹುಡುಗಿಯರು ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವುದಿಲ್ಲ,
👉ಅತಿಥಿಗಳು ಮನೆಗೆ ಬಂದಾಗ ಒಂದು ಲೋಟ ನೀರನ್ನು ಕೊಡಲು ಮನಸ್ಸಿಲ್ಲ,
👉20 ವರ್ಷ ವಯಸ್ಸಾದರೂ ಕೆಲವು ಹುಡುಗಿಯರಿಗೆ ಅಡುಗೆ ಮಾಡಲಾಗುವುದಿಲ್ಲ,
👉 ಸರಿಯಾಗಿ ಉಡುಗೆ ಉಡಿಸುವುದು ಸವಾಲಾಗಿದೆ,
👉ಪ್ಯಾಷನ್, ಟ್ರೆಂಡ್, ತಂತ್ರಜ್ಞಾನ, ಎಲ್ಲವೂ ಅವ್ಯವಸ್ಥಿತ,
ಈ ಎಲ್ಲದಕ್ಕೂ ಕಾರಣ ನಾವುಗಳು, ನಮ್ಮ ಗರ್ವ, ಮಾನ, ಮರ್ಯಾದೆ ಮತ್ತು ಪ್ರಭಾವ ಮಕ್ಕಳಿಗೆ ಜೀವನ ಪಾಠ ಕಲಿಸುತ್ತಿಲ್ಲ,
ಕಷ್ಟ ಅನುಭವಿಸದವರು, ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲಾರರು,
ಇಂದಿನ ಯುವಕರು 15 ನೇ ವಯಸ್ಸಿಗೆ *ಪ್ರೇಮಕತೆ, ಧೂಮಪಾನ, ಮದ್ಯಪಾನ, ಜೂಜು, ಡ್ರಗ್ಸ್,* ಇನ್ನು ಮುಂತಾದ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ, ಜೊತೆಗೆ *ಸೋಮಾರಿತನಗಳಾಗಿ ಜೀವನದ ಗುರಿ* ಇಲ್ಲದೆ ತಿರುಗುತ್ತಿದ್ದಾರೆ,
ಮಕ್ಕಳ ಜೀವನದ ಭದ್ರತೆ ನಮ್ಮೆಲ್ಲರ ಹೊಣೆಯಾಗಿದೆ, ನಾವು ಎಚ್ಚರ ವಹಿಸದಿದ್ದರೆ, ಭವಿಷ್ಯದ ಪೀಳಿಗೆಯು ನಾಶವಾಗುತ್ತದೆ, ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಜೀವನಕ್ಕಾಗಿ ನಾವು ಬದಲಾಗಬೇಕು,ಮತ್ತು ಬದಲಾಯಿಸಬೇಕು.
*ಗುರುವನ್ನು ಗೌರವಿಸದ ಸಮಾಜ ನಾಶವಾಗುತ್ತದೆ*
ಇದನ್ನು ಓದಿದ ಎಲ್ಲರೂ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ,
ಎಲ್ಲರೂ ಬದಲಾವಣೆಯಾಗುತ್ತಾರೆ ಎಂದು ನಾನು ಭಾವಿಸಿಲ್ಲ, ಆದರೆ ಕನಿಷ್ಠ ಪಕ್ಷ ಒಬ್ಬರಾದರೂ ಬದಲಾಗುತ್ತಾರೆ, ಇಲ್ಲವೆ ಬದಲಾಯಿಸುತ್ತಾರೆ, ಎಂಬ ನಂಬಿಕೆ.