logo

ಮುಂಬೈ ಚೈತ್ರ ಭೂಮಿ ರಥಯಾತ್ರೆ ಗೆ ಚಾಲನೆ

ದೇವನಹಳ್ಳಿ ಸುದ್ದಿ: ವರದಿ:ಹೈದರ್ ಸಾಬ್

ದೇವನಹಳ್ಳಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಸಂವಿದ್ಧನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ಸರ್ಕಾರ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಮ್ಯಾಥ್ಯೂ ಮುನಿಯಪ್ಪ ಅವರ ನೇತೃತ್ವದಲ್ಲಿ ಮುಂಬೈ ಚೈತ್ರ ಭೂಮಿ ರಥಯಾತ್ರೆ ಗೆ ಚಾಲನೆ ನೀಡಲಾಯಿತು.

ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯಾಧ್ಯಕ್ಷ ಬೆಳ್ತುರ್ ವೆಂಕಟೇಶ್ ಮಾತನಾಡಿ, ಬಾಬಾ ಸಾಹೇಬರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಕತ್ತಲೆಯಿಂದ ಬೆಳಕಿನ ಕಡೆಗೆ ದಾರಿ ತೋರಿಸಿದ ಮಹಾನ್ ಚೇತನ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಮ್ಯಾಥ್ಯೂ ಮುನಿಯಪ್ಪ ಅಧ್ಯಕ್ಷತೆಯಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಫುತ್ತಳಿಗೆ ಹೂವಿನ ಹಾರ ಹಾಕಿ, ಮೊಮ್ಬತ್ತಿ ಬೆಳಗಿಸಿ ಬಾಬಾ ಸಾಹೇಬರು ಅಮರ ಎಂಬ ಘೋಷಣೆ ಕೂಗುವುದರ ಮೂಲಕ ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕಾರಹಳ್ಳಿ ಕೆಂಪಣ್ಣ, ಡಿಎಸ್ಎಸ್ ಎಂ.ಮುನಿರಾಜು, ನವೀನ್, ಬೊಮ್ಮವರ ಮಂಜುನಾಥ್, ರಮೇಶ್, ಚಿಕ್ಕಬಳ್ಳಾಪುರ ಮಹಿಳಾ ಜಿಲ್ಲಾಧ್ಯಕ್ಷ ಸಿಂಧೀಶ್ರೀ, ಯುವ ಘಟಕದ ರಾಜ್ಯಾಧ್ಯಕ್ಷ ಅಂಜಿನಪುರ ವೆಂಕಟೇಶ್, ಕೊಡಗುರ್ಕಿ ಮನು ಹಾಗೂ ಪದಾಧಿಕಾರಿಗಳು ಇದ್ದರು.

ಚಿತ್ರ:

17
90 views