ಬಸ್-ಲಾರಿ ಅಪಘಾತ: ₹2500. ದಂಡ ವೇದಿಸಿದ ನ್ಯಾಯಾಲಯ
ಕೊಪ್ಪಳ ಜಿಲ್ಲೆಯ ಕುಷ್ಟಗಿ.ದಿನಾಂಕ:23.05.2011 ರಂದು ಬೆಳಿಗ್ಗೆ 08.30 ಗಂಟೆಗೆ ಕುಷ್ಟಗಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-150 ಕುರುಬನಾಳ ಕ್ರಾಸ್ ಹತ್ತಿರ ಆರೋಪಿ ಶಿವಾನಂದಪ್ಪ ತಂದೆ ರಾಮಪ್ಪ ಗೊರಳ್ಳಿ ಸಾ॥ಕಾಟಾಪೂರ ಈತನು ತಾನು ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ:ಕೆ.ಎ-37 ಎಫ್-483 ನೇದ್ದನ್ನು ಕುಷ್ಟಗಿ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಹಿಸಿಕೊಂಡು ಹೊರಟಿದ್ದು. ಅದೇ ವೇಳೆಗೆ ಹೊಸಪೇಟೆ ಕಡೆಯಿಂದ ಲಾರಿ ನಂ:ಹೆಚ್.ಆರ್-74/5025 ನೇದ್ದರ ಚಾಲಕ ಅರ್ಷದ್ ಜೋಗಿಪುರ, ಹರಿಯಾಣ ಈತನು ಕೂಡಾ ಅಷ್ಟೆ ಅತೀ ವೇಗ ಮತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಖಾಮುಖಿ ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಬಸ್ಸಿನಲ್ಲಿದ್ದ ಒಟ್ಟು 30 ಜನರಿಗೆ ಸಾದಾ ಹಾಗೂ ತೀವ್ರ ಸ್ವರೂಪದ ಗಾಯವಾಗಿರುತ್ತದೆ ಎಂದು ಬಸವರಾಜ ತಂದೆ ಫಕೀರಪ್ಪ ಹೊಸೂರು(ಸಹಾಯಕ ಕೃಷಿ ಅಧಿಕಾರಿಳು) ಸಾಕುಷ್ಟಗಿ ರವರು ದೂರನ್ನು ನೀಡಿದ್ದು ಇರುತ್ತದೆ.ಆರೋಪಿ ಶಿವಾನಂದಪ್ಪ ತಂದೆ ರಾಮಪ್ಪ ಗೊರಳ್ಳಿ ಈತನಿಗೆ ಕುಷ್ಟಗಿ ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಯಲಯದ ನ್ಯಾಯಧೀಶರಾದ ಶ್ರೀ ಮಾಯಪ್ಪ ಲಗಮಪ್ಪ ಪೂಜೇರಿ ರವರು ದೋಷಿ ಎಂದು ತಿರ್ಮಾನಿಸಿ ಕಲಂ:279 ಐಪಿಸಿ ಅಡಿ ಅಪರಾಧಕ್ಕೆ 1000/- ರೂ. ದಂಡವನ್ನು, ಕಲಂ:337 ಐಪಿಸಿ ಅಡಿ ಅಪರಾಧಕ್ಕೆ 500/- ರೂ. ದಂಡವನ್ನು, ಹಾಗೂ ಕಲಂ:338 ಐಪಿಸಿ ಅಡಿ ಅಪರಾಧಕ್ಕೆ 1000/- ರೂ. ದಂಡವನ್ನು, ಆರೋಪಿ ಶಿವಾನಂದಪ್ಪ ಗೊರಳ್ಳಿ ಈತನಿಗೆ ಒಟ್ಟು 2,500/- ರೂ ದಂಡವನ್ನು ಮಾನ್ಯ ಗೌರವಾನ್ವಿತ ನ್ಯಾಯಾಲಯವು ಆದೇಶಿಸಿರುತ್ತದೆ. ಸರಕಾರದ ಪರವಾಗಿ ಶ್ರೀ ಅಭಿದುಲ್ಲಾ ಇಮಾಮಸಾಬ ಹಾದಿಮನಿ ಸಹಾಯಕ ಸರಕಾರಿ ಅಭಿಯೋಜಕರು ಕುಷ್ಟಗಿ ಹಾಗೂ ಶ್ರೀ ರಾಯನಗೌಡ ಎಲ್ ಸಹಾಯಕ ಸರಕಾರಿ ಅಭಿಯೋಜಕರು, ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಕುಷ್ಟಗಿ ರವರು ಪ್ರಕರಣ ಕುರಿತು ವಿಚಾರಣೆ ಮತ್ತು ವಾದವನ್ನು ಮಂಡಿಸಿರುತ್ತಾರೆ. ಹಾಗೂ ಸದರಿ ಪ್ರಕರಣದಲ್ಲಿ ಶ್ರೀ ಬಿ.ಅಮರೇಶ ಪಿ.ಎಸ್.ಐ(ಮೊದಲ ತನಿಖಾಧಿಕಾರಿ) ಹಾಗೂ ಶ್ರೀ ನಾರಾಯಣ ದಂಡೀನ್ (ಎರಡನೇ ತನಿಖಾಧಿಕಾರಿ) ಪಿ.ಎಸ್.ಐ. ಕುಷ್ಟಗಿ ರವರು ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ಮಾನ್ಯ ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಕುಷ್ಟಗಿಯಲ್ಲಿ ರೋಪಣಾ ಪಟ್ಟಿಯನ್ನು ಕುಷ್ಟಗಿಯ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು ಎಂದು ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ