logo

ಹಳೇ ವಿದ್ಯಾರ್ಥಿಗಳಿಂದ ನೆಚ್ಚಿನ ಶಿಕ್ಷಕರಿಗೆ ಗೌರವ

*ನಲ್ಲೂರು ಶ್ರೀ ಮಾರುತಿ ಪ್ರೌಢ ಶಾಲೆ ೧೯೯೪-೯೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ*

ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರು (ಜೊನ್ನಹಳ್ಳಿ) ೧೯೯೪-೯೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ನಡೆಯಿತು.

ಅಕ್ಷರ ಜ್ಞಾನವನ್ನು ನೀಡಿದ ಶಿಕ್ಷಕರನ್ನು ಗೌರವ, ಪ್ರೀತಿ ಮತ್ತು ಕೃತಜ್ಞತೆ ಸಲ್ಲಿಸುವ ವಿಶೇಷ ಸಮಾರಂಭರವನ್ನು ಆಯೋಜಿಸಿ ತಮ್ಮ ನೆಚ್ಚಿನ ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಮೂಲಕ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮವಾಗಿದೆ. ಪ್ರೌಢ ಶಾಲಾ ಹಂತದಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕುವುದರ ಮೂಲಕ ಎಂದು ಹಳೇ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಿವೃತ್ತ ಶಿಕ್ಷಕ ಮುನಿರೆಡ್ಡಿ.ಕೆ.ಎನ್ ಮಾತನಾಡಿ, ೧೯೯೪ರಲ್ಲಿ ಮುಖ್ಯ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಬೇಕೆಂಬ ಕಲ್ಪನೆ ಮಾತ್ರ ನಮ್ಮಲ್ಲಿತ್ತು. ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಉನ್ನತ ಸ್ಥಾನಮಾನದಲ್ಲಿರುವುದು ಸಂತಸದ ವಿಚಾರವಾಗಿದೆ. ಶಿಕ್ಷಕರನ್ನು ಸ್ಮರಿಸಿಕೊಂಡು ನಮಗೆ ವೇದಿಕೆ ಕಲ್ಪಿಸಿ ಸನ್ಮಾನಿಸುತ್ತಿರುವುದು ನಮ್ಮ ವೃತ್ತಿಗೆ ಒಂದು ತೃಪ್ತಿದಾಯಕ ಕೊಡುಗೆ ಎಂದು ಭಾವಿಸುತ್ತೇವೆ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ನಾಗರಾಜು, ಕೆ.ಪಿ.ರಾಜಣ್ಣ, ಎನ್.ತಿಮ್ಮಪ್ಪ, ಎಸ್.ಮಂಜಣ್ಣ, ಕಾಂತಣ್ಣ.ಬಿ, ಜೆ.ಪಿ.ಜಯರಾಮಪ್ಪ, ಚಿನ್ನಮ್ಮ ಅವರನ್ನು ಹಳೇ ವಿದ್ಯಾರ್ಥಿಗಳಿಂದ ಅಭಿನಂದಿಸಿ ಗೌರವಿಸಲಾಯಿತು.

ಈ ವೇಳೆ ೧೯೯೪-೯೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ, ಮಕ್ಕಳು ಇದ್ದರು.

ಚಿತ್ರ: ದೇವನಹಳ್ಳಿ ತಾಲೂಕಿನ ನಲ್ಲೂರು ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ೧೯೯೪-೯೫ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿದರು.
REPORTER: HYDER SAB 9743784848

39
2616 views