ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಶಿವುಕುಮಾರ ಬೆಳಗುಂದಿ ಆಯ್ಕೆ
ಯಾದಗಿರಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯಾದಗಿರಿ ಜಿಲ್ಲೆಯ ಕಾರ್ಯದರ್ಶಿಯಾಗಿ ಶಿವುಕುಮಾರ ಬೆಳಗುಂದಿ ಅವರನ್ನು ಗುರುವಾರ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಯಾದಗಿರಿ ಜಿಲ್ಲೆ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ಹೇಳಿದರು, ಈ ಕುರಿತು ಆದೇಶ ಪತ್ರ ನೀಡಿ ಮಾತನಾಡಿದ ಅವರು, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಆದೇಶ ಹೊರಡಿಸಲಾಗಿದೆ ಈ ಕೂಡಲೇ ನೂತನವಾಗಿ ನೇಮಕಗೊಂಡ ಕಾರ್ಯದರ್ಶಿಗಳು ಪಕ್ಷದ ಏಳಿಗೆಗಾಗಿ ಶ್ರಮಿಸುವ ನೂತನ ಕಾರ್ಯದರ್ಶಿಗಳ ಅಗತ್ಯವಿದೆ. ಹಾಗೂ ಪಕ್ಷ ಬಲಪಡಿಸುವ ಜವಾಬ್ದಾರಿ ಹೊಂದಬೇಕು ಎಂದರು. ಈ ವೇಳೆಯಲ್ಲಿ ನೂತನ ಕಾರ್ಯದರ್ಶಿಗಳು ತಿಮ್ಮಣ್ಣ ನಾಯಕ , ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.