logo

ಕೆ. ಬೇವಿನಹಳ್ಳಿಯ ಯುವಕರಿಂದ ಮಂಗಳೂರು–ಕಟೀಲು ಕ್ಷೇತ್ರಗಳ ದರ್ಶನ

ಕೆ. ಬೇವಿನಹಳ್ಳಿಯ ಯುವಕರಿಂದ ಮಂಗಳೂರು–ಕಟೀಲು ಕ್ಷೇತ್ರಗಳ ದರ್ಶನ

ಕೆ. ಬೇವಿನಹಳ್ಳಿ: ಕೆ. ಬೇವಿನಹಳ್ಳಿಯ ಯುವಕರು ಮಂಗಳೂರಿನ ಪ್ರಸಿದ್ಧ ದೇವಾಲಯಗಳು ಹಾಗೂ ದೈವಸ್ಥಾನಗಳಿಗೆ ಭಕ್ತಿಪೂರ್ವಕವಾಗಿ ಭೇಟಿ ನೀಡಿ ದರ್ಶನ ಪಡೆದರು.

ಯುವಕರು ಮೊದಲು ಮಂಗಳೂರಿನ ಕೊರಗಜ್ಜ ದೇವಸ್ಥಾನ, ನಂತರ ಆದಿಶಕ್ತಿ ಶ್ರೀ ರಕ್ತೇಶ್ವರಿ ಅಮ್ಮನವರು, ಬೆರಮೆರ್ ಏಳ್ವೆರ್ ಸಿರಿಗಳು ಕುಮಾರ, ಶ್ರೀ ಕೊರಗಜ್ಜ ದೈವದ ಆದಿಸ್ಥಳ ಸ್ವಾಮಿ, ನಂದಿಕೋಣ ದೇವರು, ಹಾಗೂ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ದರ್ಶನವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಲ್ಲ ದೇವಾಲಯಗಳು ಮತ್ತು ದೈವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ದೇವರ ದರ್ಶನದಿಂದ ಯುವಕರು ಆಧ್ಯಾತ್ಮಿಕ ಶಾಂತಿ ಹಾಗೂ ಸಕಾರಾತ್ಮಕ ಶಕ್ತಿಯನ್ನು ಪಡೆದರು ಎಂದು ತಿಳಿಸಿದರು.

ಈ ಧಾರ್ಮಿಕ ಪ್ರವಾಸದಲ್ಲಿ ಭಾಗವಹಿಸಿದ ಯುವಕರಾದ ವಿಶ್ವನಾಥ ಡಿ. ಆರ್. ಮಂಜುನಾಥ್. ಜಿ. ಕೆ. ವಿಶ್ವನಾಥ. ಎಚ್.ಎಂ . ವಿಶ್ವನಾಥ. ಕೆ. ಎಚ್.ವಿನಯ್. ಡಿ. ಆರ್ ಹಾಗೂ ಪ್ರಸಾದ್ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರೂ.

300
6796 views