ರೈಲಿನಲ್ಲಿ ಅಪರಿಚಿತರ ಜೊತೆ ದೋಸ್ತಿ ಮಾಡೋ ಮುನ್ನ ಎಚ್ಚರ..!!
ರೈಲಿನಲ್ಲಿ ಅಪರಿಚಿತರ ಜೊತೆ ದೋಸ್ತಿ ಮಾಡೋ ಮುನ್ನ ಎಚ್ಚರ..!! ರೈಲಿನಲ್ಲಿ ಪರಿಚಯ ಮಾಡ್ಕೊಂಡು ಜೊತೆಯಲ್ಲಿ ಟೀ ಕುಡಿಯುವಾಗ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದೋಚಿದ್ದ ಇಬ್ಬರನ್ನ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೊದಲು ಪರಿಚಯ ಮಾಡ್ಕೊಳ್ತಾರೆ..ಆಮೇಲೆ ಟೀ ಜ್ಯೂಸ್ ತಂದು ಕೊಡ್ತಾರೆ. ಅಪರಿಚಿತ ಸ್ನೇಹಿತ ಆಗಿದ್ದಾನೆ ಅಂತ ಆತ ತಂದುಕೊಟ್ಟಿದ್ದು ಟೀ, ಜ್ಯೂಸ್ ಕುಡಿದ್ರೆ ಕಥೆ ಮುಗೀತು. ಕ್ಷಣಾರ್ಧದಲ್ಲೇ ನಿಮ್ಮ ಬ್ಯಾಗು, ಜೇಬಲ್ಲಿರೋ ಹಣ ಮಂಗಮಾಯವಾಗುತ್ತೆ. ಇದೇ ರೀತಿ ಟ್ರೈನ್ ನಲ್ಲಿ ಅಪರಿಚಿತ ಟೀ ಕುಡಿದು ವ್ಯಕ್ತಿಯೊಬ್ಬರು ಯಾಮಾರಿದ್ದಾರೆ. ಬಿಹಾರ ಮೂಲದ ಕೃಷ್ಣಕುಮಾರ್ ಎಂಬಾತ ಇದೇ ಎರಡನೇ ತಾರೀಕು ದಾನಾಪುರಕ್ಕೆ ಹೊರಟಿದ್ದ. ಇದೇ ವೇಳೆ ಟ್ರೈನ್ ನಲ್ಲಿ ಇಬ್ಬರು ಅಸಾಮಿಗಳು ಪರಿಚಯ ಆಗಿದ್ರು. ನಾವು ಬಿಹಾರದವ್ರೆ ಅಂತ ಪರಿಚಯ ಮಾಡಿಕೊಂಡು ತುಂಬಾ ಕ್ಲೋಸ್ ಆದ್ರು. ಈ ನಡುವೆ ಮಾರ್ಗಮಧ್ಯೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಟೀ ತಂದು ಕೊಟ್ಟಿದ್ರು. ಟೀ ನಲ್ಲಿ ಮತ್ತು ಬರೋ ಔಷಧಿ ಬೆರೆಸಿ ಕೊಟ್ಟಿದ್ದರು. ಜೊತೆಗೆ ಅವರಿಬ್ಬರು ಕೂಡಾ ಕುಡಿಯುತ್ತಿದ್ದನ್ನ ನೋಡಿ ಕೃಷ್ಣಕುಮಾರ್ ಕೂಡಾ ಟೀ ಕುಡಿದಿದ್ದರು. ಸ್ವಲ್ಪ ಹೊತ್ತಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೃಷ್ಣಕುಮಾರ್ ಅವರ ಬಳಿ ಚಿನ್ನದ ಸರ, ನಾಲ್ಕು ಸಾವಿರ ಹಣ ಸೇರಿದಂತೆ ಬ್ಯಾಗ್ ಸಮೇತ ಪರಾರಿಯಾಗಿದ್ರು. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತನಿಖೆ ನಡೆಸಿದ್ರು. ಆ ಬಳಿಕ ಇದೇ ರೀತಿ ಮತ್ತೊಬ್ಬ ವ್ಯಕ್ತಿ ಬಳಿ ಕಳ್ಳತನಕ್ಕೆ ಪ್ಲಾನ್ ಮಾಡ್ತಿದ್ದಾಗ ಖಾಕಿ ಬಲೆಗೆ ಬಿದ್ದಿದ್ದಾರೆ. ಬಿಹಾರ ಮೂಲದ ಸಫರ್ ಮತ್ತು ಸತರ್ಮ್ ಎಂಬ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಬೈಯಪ್ಪನಹಳ್ಳಿ ರೈಲ್ವೇ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗ್ತಿದೆ.