. *ಜೀವಕ್ಕೆ ನೆಮ್ಮದಿ ನೀಡುವುದೇ ಜಾನಪದ ಸಂಗಣ್ಣ ಗದ್ದಿ*
. *ಜೀವಕ್ಕೆ ನೆಮ್ಮದಿ ನೀಡುವುದೇ ಜಾನಪದ ಸಂಗಣ್ಣ ಗದ್ದಿ*
ಇಳಕಲ್: ಜಾನಪದ ಎಂಬುದು ಬದುಕಿನ ಸತ್ಯತೆ, ಕಾಯಕದ ಮೇಲೆ ನಿಂತಿದೆ ಇಂತಹ ಜೀವನಕ್ಕೆ ನೆಮ್ಮದಿ ನೀಡುವುದೇ ಜಾನಪದ ಎಂದು ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಂಗಣ್ಣ ಗದ್ದಿ ಹೇಳಿದರು. ನಗರದ ಶಾಸಕರ ಸರ್ಕಾರಿ ಕಂಠೀರವರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ಹಳ್ಳಿಯ ಸೊಗಡು ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜನರಲ್ಲಿ ನೈತಿಕ ಶಕ್ತಿ ಸೌಂದರ್ಯ ಆರೋಗ್ಯ ಇದರೊಂದಿಗೆ ಮಾನವೀಯತೆ ನಿಕಟ ಸಂಬಂಧವನ್ನು ಜಾನಪದ ಹೊಂದಿದೆ ಎಂದರು. ಶಿಕ್ಷಕರ ಸಂಘದ ಅಧ್ಯಕ್ಷ ರಂಗನಾಥ ಮಾಸರೆಡ್ಡಿ, ಪರಶುರಾಮ ಪಮ್ಮಾರ, ಸಂಗಮೇಶ ಬಂಡರಗಲಾ, ಮುತ್ತಣ್ಣ ಬೀಳಗಿ, ಸಂಗಣ್ಣ ಗದ್ದಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು ಸತ್ಕಾರಕ್ಕೆ ಉತ್ತರವಾಗಿ ಪಮ್ಮಾರ ಅವರು ಮಾತನಾಡುತ್ತಾ ಹುನಗುಂದ ಇಳಕಲ್ ಉಭಯ ತಾಲೂಕಿನಲ್ಲಿ ಇಳಕಲ್ ಶಾಸಕರ ಸರ್ಕಾರಿ ಮಾದರಿ ಶಾಲೆಯ ಎಸ್. ಡಿ. ಎಮ್.
ಮಾದರಿಯಾಗಿದೆ ಎಂದರು. ರಂಗನಾಥ ಮಾಸರೆಡ್ಡಿ ಮಾತನಾಡಿ ಹಳ್ಳಿಯ ಸೊಗಡು ಇನ್ನಿತರ ಹಲವಾರು ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುವ ಈ ಶಾಲೆ ಸರ್ಕಾರಿ ಶಾಲೆಗಳ ಸೌಭಾಗ್ಯ ವಾಗಿದೆ ಎಂದರು. ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ. ಸದಸ್ಯ ಮಹಾಂತೇಶ ಗೊರಜನಾಳ ಮಾಡಿದರು ರಾಶಿ ಮಾಡುವ ಸನ್ನಿವೇಶ, ಜೋಕುಮಾರ, ಕುಟ್ಟುವುದು, ಬೀಸುವುದು, ನಾಮಕರಣ ಸನ್ನಿವೇಶ, ಕಣಿಹೇಳುವುದು, ಅಳ್ಳೊಳ್ಳಿ, ಬಿತ್ತುವುದು, ತುಳಿಸಿ, ಲಕ್ಷ್ಮಿ ಪೂಜೆ, ನೀರು ಸೇರುವ ಭಾವಿ, ರೈತರಿಗೆ ಸಂಬಂಧಿಸಿದ ಎಲ್ಲಾ ಉಪಕರಣಗಳ ಪ್ರದರ್ಶನ ಗ್ರಾಮೀಣ ಜೀವನದ ಸಂಪೂರ್ಣ ಜೀವನಶೈಲಿಯನ್ನು ಪ್ರದರ್ಶಿಸಿದರು, ಆಶಾರಾಣಿ, ವಿಜಯಲಕ್ಷ್ಮಿ ನಾಗಲೋಟಿ, ಲಲಿತಾ ಬಿಜ್ಜಳ,ಎಸ್. ಎಸ್. ಬೇನಾಳ, ಶಿವಾನಂಧ ಕೋರಿ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಮೊದಲಾದವರು ವೇದಿಕೆ ಮೇಲಿದ್ದರು ಶಾಲೆಯ ಶಿಕ್ಷಕರಾದ ಗೀತಾ ಜಂಗಮಶೆಟ್ಟಿ ಮತ್ತು ಶ್ರೀಶೈಲ ದೋತ್ರೆ ಜಾನಪದ ಗೀತೆಗಳು ಹಾಡಿದರು. ಶಾಲೆಯ ವಿದ್ಯಾರ್ಥಿಗಳಿಂದ ಕುಂಭದ ಮೆರವಣಿಗೆ ಚಕ್ಕಡಿ ಅಲಂಕಾರ ಮಾಡಿ ಇನ್ನಿತರ ವೇಷಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳ ಜಾಥಾವು ಗ್ರಾಮ ಚೌಡಿಯಿಂದ ಹೊರಟು ಹಳೆಯ ದ್ವಾರಕಾ ಲಾಡ್ಜ್,
ಕಂಠಿ ವೃತ್ತ ಅಲ್ಲಿ ಕಂಠಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು,ಸಾಲಪೇಟೆ, ಬಸವಣ್ಣ ದೇವರ ಗುಡಿ,
ಮುಖ್ಯರಸ್ತೆ, ಗಾಂಧಿ ಚೌಕ್ ಮಾರ್ಗವಾಗಿ ಬಂದು ಶಾಲೆಗೆ ತಲುಪಿತು ಎಸ್.ಡಿ.ಎಂ.ಸಿ. ಸದಸ್ಯರು ಶಾಲಾ ಶಿಕ್ಷಕರು
ಮತ್ತು ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ. ಸಿ. ಉಪಾಧ್ಯಕ್ಷ ಪ್ರಶಾಂತ ಹಂಚಾಟೆ ಮಾತನಾಡಿ ನಾವು ಬದುಕುತ್ತಿದ್ದೇವೆ ಎಂದರೆ ರೈತರು ನೀಡುವ ಆಹಾರ ಧಾನ್ಯದಿಂದ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಲ್ಲರು ಎನ್ನುವುದಕ್ಕೆ ಈ ಹಳ್ಳಿ ಸೊಗಡೆ ಉದಾಹರಣೆ ಎಂದರು. ಅನುಶಾ ಲವಳಸರ ಪ್ರಾರ್ಥಿಸಿದರು, ವಿಜಯಲಕ್ಷ್ಮಿ ಮುರುಡಿ ಸ್ವಾಗತಿಸಿದರು, ಮುಖ್ಯಗುರು ಬಿ. ಎಂ. ಹೊರಗಿನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿ.ಎಸ್. ಬಂಡಿ ಪರಿಚಯಿಸಿದರು,ನಿರೋಷಾ ಭೋವಿ ನಿರೂಪಿಸಿದರು, ಕವಿತಾ ಮಸರಕಲ್ಲ ವಂದಿಸಿದರು.
ವರದಿ ಕಾಸಿಂಅಲಿಶಾ ಮಕಾನದಾರ್