logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಚಿಕ್ಕಬಳ್ಳಾಪುರದ ನಾಗಾರ್ಜುನ ಪದವಿ ಪೂರ್ವ ಕಾಲೇಜಿನಲ್ಲಿ ಅನುಬಂಧ 2026 ಕಾರ್ಯಕ್ರಮ ಆಯೋಜನೆ

ಚಿಕ್ಕಬಳ್ಳಾಪುರ ನಾಗಾರ್ಜುನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅನುಬಂಧ 2026 ಎಂಬ ಶೀರ್ಷಿಕೆ ಅಡಿಯಲ್ಲಿ ವರ್ಣರಂಜಿತವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಅಥ್ಲೆಟಿಕ್ ಹಾಗೂ ಮೋಟಿವೇಷನ್ ಗುರು ಅರ್ಜುನ್ ದೇವಯ್ಯ ಭಾಗವಹಿಸಿದ್ದರು ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ ಇದು ಸ್ಪರ್ಧಾತ್ಮಕ ಪ್ರಪಂಚ ಇಲ್ಲಿ ನಾವು ಗೆಲ್ಲಬೇಕೆಂದರೆ ತಾಳ್ಮೆ ಮತ್ತು ಯೋಜನಾ ಶಕ್ತಿ ಬಹಳ ಮುಖ್ಯ. ದೃಢವಾದ ಸಂಕಲ್ಪದಿಂದ ಮಾತ್ರವೇ ನಮ್ಮ ಗುರಿ ಸಾಧಿಸಲು ಸಾಧ್ಯ. ಎಂದು ತಿಳಿಸಿದರು. ಯಲಹಂಕ ವಿಭಾಗದ ನಾಗಾರ್ಜುನ ಪಿಯು ಕಾಲೇಜಿನ ಪ್ರಾಂಶುಪಾಲರಾದ ನಂಜುಂಡಪ್ಪನವರು ಮಾತನಾಡುತ್ತ . ಪರೀಕ್ಷೆ ಎಂಬ ಆತಂಕ ನಿಮಗೆ ಬೇಡ ನೀವು ಕಷ್ಟಪಟ್ಟು ಓದಿದ್ದೀರಾ ನಿಮಗೆ ಉತ್ತಮ ಫಲಿತಾಂಶ ಖಂಡಿತ ಸಿಗುತ್ತದೆ ನಿಮ್ಮ ಭವಿಷ್ಯದ ಕನಸುಗಳು ನನಸಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ ಮ್ಯಾನೇಜ್ಮೆಂಟ್ ಸೈನ್ಸ್ ಕಾಲೇಜ್ ಪ್ರಾಂಶುಪಾಲರು ಡಾ. ಆನಂದಮ್ಮ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ತಿಪ್ಪೇಸ್ವಾಮಿ ಮತ್ತು ನಾಗಾರ್ಜುನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಾಂತೇಶ್ ಮುಂತಾದವರು ಭಾಗವಹಿಸಿದ್ದರು.

5
921 views

Comment