ಸಚಿವ ಪ್ರಿಯಾಂಕ ಖರ್ಗೆ ಅವರಿಂದ 2026ನೇ ವರ್ಷದ ‘ಅಭಿಮಾನಿಗಳ ಬಳಗ’ದ ಕ್ಯಾಲೆಂಡರ್ ಬಿಡುಗಡೆ
ಬೆಂಗಳೂರು: ಯಾದಗಿರಿಯ ‘ಪ್ರಿಯಾಂಕ ಅಭಿಮಾನಿಗಳ ಬಳಗ’ದ ವತಿಯಿಂದ ಸಿದ್ಧಪಡಿಸಲಾದ 2026ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನ ತಮ್ಮ ಸಚಿವರ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು. ಖರ್ಗೆ ಕುಟುಂಬದ ಕಟ್ಟಾ ಅಭಿಮಾನಿ ಹಾಗೂ ಯಾದಗಿರಿಯ ಕಾಂಗ್ರೆಸ್ ಯುವ ಮುಖಂಡ ಧರ್ಮು ಗಿರೆಪ್ಪನೋರ್ ಅವರ ನೇತೃತ್ವದಲ್ಲಿ ಈ ಕ್ಯಾಲೆಂಡರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಸಚಿವರು ಕ್ಯಾಲೆಂಡರ್ ಬಿಡುಗಡೆ ಮಾಡಿ ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಧರ್ಮು ಗಿರೆಪ್ಪನೋರ್, "ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಯುವ ಸಮೂಹಕ್ಕೆ ಪ್ರಿಯಾಂಕ ಖರ್ಗೆ ಅವರು ಸದಾ ಸ್ಫೂರ್ತಿಯಾಗಿದ್ದಾರೆ. ಅವರ ಮೇಲಿನ ಅಭಿಮಾನದಿಂದ 2026ರ ಕ್ಯಾಲೆಂಡರ್ ಅನ್ನು ಹೊರತರಲಾಗಿದೆ. ಜಿಲ್ಲೆಯಾದ್ಯಂತ ಅಭಿಮಾನಿಗಳಿಗೆ ಈ ಕ್ಯಾಲೆಂಡರ್ ಅನ್ನು ವಿತರಿಸಲಾಗುವುದು," ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಿಯಾಂಕ ಅಭಿಮಾನಿಗಳ ಬಳಗದ ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.