logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸಿದ್ದರಾಮಯ್ಯ ಅವರಿಗೆ ಹಡಪದ ಸಮಾಜದ ಮನವಿ

ಬೆಂಗಳೂರು, 2025–26ನೇ ಸಾಲಿನ ರಾಜ್ಯ ಬಜೆಟ್ ಪೂರ್ವಭಾವಿ ಸಭೆ:
ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಸಮಾಜದ ಮುಖಂಡರ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ವಿವಿಧ ಹಿಂದುಳಿದ ಸಮುದಾಯಗಳ ಪ್ರತಿನಿಧಿಗಳು ತಮ್ಮ ಸಮಾಜಗಳ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ), ಬೆಂಗಳೂರು ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ದೇವು ಹಡಪದ, ಕಾರ್ಯದಕ್ಷರಾದ ಶ್ರೀ ಗದ್ದೇಪ್ಪ ಜಕ್ಕೇರಮಡು, ವಿಜಯನಗರ ಜಿಲ್ಲೆಯ ಜಿಲ್ಲಾ ಪ್ರತಿನಿಧಿಗಳಾದ ಶ್ರೀ ಸಿದ್ದಲಿಂಗ ಸ್ವಾಮಿ (ಅಪ್ಪಾಜಿ) ಅವರು ಹಾಜರಿದ್ದರು.
ಸಭೆಯಲ್ಲಿ ಹಡಪದ ಸಮಾಜದ ಪರವಾಗಿ ವಿವಿಧ ಅಭಿವೃದ್ಧಿ ಸಂಬಂಧಿತ ಬೇಡಿಕೆಗಳನ್ನು ಸಲ್ಲಿಸಿ, 2025–26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಮಾಜದ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಸಮಸ್ತ ಸಮಾಜದ ಪರವಾಗಿ ಮನವಿ ಮಾಡಲಾಯಿತು.
ಸಭೆ ಸ್ನೇಹಪೂರ್ಣ ಹಾಗೂ ರಚನಾತ್ಮಕ ವಾತಾವರಣದಲ್ಲಿ ನಡೆಯಿತು.

21
959 views

Comment