logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾ ST ಮೋರ್ಚಾ ಅಧ್ಯಕ್ಷರಾಗಿ ಮಾಸಲಿಂಗ ಚಂದಪ್ಪ ನೇಮಕ

ಯಾದಗಿರಿ: ರಾಷ್ಟ್ರೀಯ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಕ್ಕೂಟವಾದ 'ರಾಷ್ಟ್ರೀಯ ಅಹಿಂದ ಸಂಘಟನೆ (ರಿ)' ಇದರ ಯಾದಗಿರಿ ಜಿಲ್ಲಾ ST ಮೋರ್ಚಾದ ಅಧ್ಯಕ್ಷರಾಗಿ ನಗರದ ನಿವಾಸಿ ಮಾಸಲಿಂಗ ಚಂದಪ್ಪ ಅವರನ್ನು ನೇಮಕ ಮಾಡಲಾಗಿದೆ.
​ಸಂಘಟನೆಯ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಎಸ್. ಶಿವಳ್ಳಿ ಅವರ ಆದೇಶದ ಮೇರೆಗೆ ಈ ನೇಮಕಾತಿ ನಡೆದಿದ್ದು, ರಾಜ್ಯ ಸಮಿತಿಯ ಮುಂದಿನ ಆದೇಶದವರೆಗೆ ಮಾಸಲಿಂಗ ಚಂದಪ್ಪ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.​
ಈ ನೇಮಕಾತಿ ಕುರಿತು ಹರ್ಷ ವ್ಯಕ್ತಪಡಿಸಿರುವ ರಾಜ್ಯ ಪದಾಧಿಕಾರಿಗಳು, "ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಜಿಲ್ಲೆಯಲ್ಲಿ ಅಹಿಂದ ವರ್ಗಗಳ, ಶೋಷಿತ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರವಾಗಿ ಧ್ವನಿ ಎತ್ತಬೇಕು. ಸಂಘಟನೆಯ ಜಾತ್ಯತೀತ ತತ್ವಗಳ ಅಡಿಯಲ್ಲಿ ನ್ಯಾಯಯುತ ಹೋರಾಟಕ್ಕೆ ಶ್ರಮಿಸಬೇಕು," ಎಂದು ತಿಳಿಸಿದ್ದಾರೆ.

9
238 views

Comment