logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

20 ವರ್ಷದಿಂದ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಹರ್ಷ

ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕೆಪಿಎಸ್ ಶಾಲೆಯಿಂದ ಶ್ಯಾನಪ್ಪನಹಳ್ಳಿ ಗ್ರಾಮಕ್ಕೆ ಹಾದುಹೋಗುವ ರಸ್ತೆ ಸುಮಾರು 20 ವರ್ಷದಿಂದ ಹದಗೆಟ್ಟಿದ್ದ ಹಿನ್ನಲೆಯಲ್ಲಿ ಇದೀಗ ಡಾಂಬರೀಕರಣಗೊಳ್ಳುತ್ತಿರುವುದರಿಂದ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಶ್ಯಾನಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೇಣು ಮಾತನಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಚ್.ಮುನಿಯಪ್ಪ ಅವರಿಗೆ ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ನಿರ್ದೇಶಕ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಡಿಎಸ್‌ಎಂಎಸ್ ಅಧ್ಯಕ್ಷ ಕೆ.ಹೊಸೂರು ಶ್ರೀನಿವಾಸ್ ಹಾಗೂ ಅನೇಕ ಮುಖಂಡರು ಜೊತೆಗೂಡಿ ರಸ್ತೇ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿ, ಸಚಿವರೊಂದಿಗೆ ಚರ್ಚಿಸಿ ಅಭಿವೃದ್ಧಿಗೊಳಿಸಲು ಕಾರಣೀಕರ್ತರಾಗಿರುತ್ತಾರೆ. ಗ್ರಾಮಸ್ಥರ ಪರವಾಗಿ ಸಚಿವರಿಗೆ ಮತ್ತು ಮುಖಂಡರಿಗೆ ಅಭಿನಂದಿಸುತ್ತೇನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಸುಮಾರು ೨೦ ವರ್ಷದಿಂದ ಆಗದ ರಸ್ತೆ ಅಭಿವೃದ್ಧಿ ಇದೀಗ ಸಚಿವ ಕೆ.ಎಚ್.ಮುನಿಯಪ್ಪ ಅವರ ನೇತೃತ್ವದಲ್ಲಿ ಆಗಿದೆ. ಯಾವುದೇ ರೀತಿಯ ಊರಿನ ಸಮಸ್ಯೆ ಹೇಳಿಕೊಂಡರೆ ಕೂಡಲೇ ಸ್ಪಂಧಿಸುವ ಮುಖಂಡರು ಇರುವುದರಿಂದ ಸಚಿವರ ಗಮನಕ್ಕೆ ತಂದು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತುಕೊಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಹೊಸೂರು ಗೌಡಪ್ಪ, ಹೆಚ್.ವಿ.ಎಸ್.ಶ್ರೀನಿವಾಸ್, ಶ್ಯಾನಪ್ಪನಹಳ್ಳಿ ಬೈರೇಗೌಡ, ರವಿಕುಮಾರ್.ಎಸ್.ಬಿ, ವಿಶ್ವನಾಥ್ ಪ್ರಮೋದ್, ಭರತ್, ವಿಜಯ್‌ಕುಮಾರ್, ಹರೀಶ್, ಕೆ.ಹೊಸೂರು ಸುಬ್ಬೇಗೌಡ, ಕೃಷ್ಣಮೂರ್ತಿ, ಪ್ರಕಾಶ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ವರದಿ - ಹೈದರ್ ಸಾಬ್ 9743784848

10
48 views

Comment