logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಎಐಬಿಎಸ್ಎಸ್ ನ ಮಾನಸಿಂಗ್ ಸ್ಪಷ್ಟನೆ || ವಿಜಯ್ ಜಾಧವ್ ಅವರೇ ನಮ್ಮ ರಾಜ್ಯಾಧ್ಯಕ್ಷ

ಯಾದಗಿರಿ : ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮುಂಬೈನ ಠಾಣೆ ನಿವಾಸಿ ಶಂಕರ್ ಪವಾರ್ ಸಂಘದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರಿಂದ ರಾಜಿನಾಮೆ ಪಡೆದರೂ ಅನಧಿಕೃತವಾಗಿ ಸಂಘದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾನಸಿಂಗ್ ಚೌವ್ಹಾಣ ಆರೋಪಿಸಿದ್ದಾರೆ. ಮಾಜಿ ಜಿಪಂ ಸದಸ್ಯ ದೇವರಾಜ ನಾಯಕ್ ಅವರು, ಶಂಕರ್ ಪವಾರ್ ಅವರ ಹಳೇ ಲೆಟರ್ ಹೆಡ್ ಬಳಸಿಕೊಂಡು ತಾವು ಸಂಘದ ರಾಜ್ಯಾಧ್ಯಕ್ಷ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪವಾರ್ ಅವರು ಸಂಘದ ಲೆಟರ್ ಹೆಡ್ ನ್ನು ಅನಧಿಕೃತವಾಗಿ ದುರುಪಯೋಗ ಮಾಡಿಕೊಂಡ ಕಾರಣ ಕಳೆದ 18 ರಂದು ನಡೆದ ಸಭೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ. ಗಮನಾರ್ಹ ವಿಷಯವೆಂದರೆ, ಶ್ರೀ ಶಂಕರ್ ಪವಾರ್, ಕಳೆದ ವರ್ಷ ಮೇ ತಿಂಗಳಲ್ಲಿ‌ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ಪದೇಪದೇ ಸಂಘದ ಹೆಸರು ದುರುಪಯೋಗ ಪಡಿಸಿಕೊಂಡ‌ ಕಾರಣ ಮುಂಬೈನ ಯವತ್ಮಾಲ್ ಪೊಲೀಸ್ ಠಾಣೆಯಲ್ಲಿ ಪವಾರ್ ವಿರುದ್ಧ ಅಧಿಕೃತವಾಗಿ ಆಪರಾಧಿಕ ದೂರು ದಾಖಲಿಸಲಾಗಿದೆ. ಹೀಗಾಗಿ ದೇವರಾಜ ನಾಯಕ್ ಅವರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಊರ್ಜಿತವಾಗಿಲ್ಲ ಎಂದು ಸ್ಪಷ್ಡಪಡಿಸಿದ್ದಾರೆ. ಇಂದಿಗೂ ವಿಜಯ ಜಾಧವ್ ಅವರೇ ನಮ್ಮ ಸಂಘದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ರಾಜ್ಯಾದ್ಯಕ್ಷರಾಗಿದ್ದು ಸಮಾಜದ ಬಂಧುಗಳು ಈ ಬಗ್ಗೆ ಗೊಂದಲ ಪಡಬಾರದು ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಾಷು ನಾಯಕ ಪಿ.ಚೌವ್ಹಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಾದವ,ಜಿಲ್ಲಾದ್್ಯಕ್ಷ ಪರಶುರಾಮ್ ಚೌವ್ಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

30
1642 views

Comment