ಕಲಬುರಗಿ ಜಿಲ್ಲೆಯ ಶಾಸಕರು ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ಸಿದ್ದರಾಮಯ್ಯಗೆ ಒತ್ತಡ
ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ , ಉತ್ತರ ಮತಕ್ಷೇತ್ರದ ಶಾಸಕಿ ಕನಿಜ್ ಫಾತಿಮಾ, ಆಫ್ಜಲ್ಪುರ್ ಮತಕ್ಷೇತ್ರದ ಶಾಸಕ ಎಂ ವೈ ಪಾಟೀಲ್ , ಆಳಂದ ಮತ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ ರವರು ಸಚಿವ ಸ್ಥಾನ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಭಾರಿ ಒತ್ತಡ ಹಾಕುತ್ತಿದ್ದು ತಮಗೆ ಸಚಿವ ಸ್ಥಾನದ ಅವಕಾಶ ಒದಗಿಸಬೇಕು ಎಂದು ಸಿದ್ದರಾಮಯ್ಯನವರ ಮನೆಯತ್ತ ಮುಖ ಮಾಡಿದ್ದಾರೆ.