ರೋಟರಿ ಕ್ಲಬ್ ನಲ್ಲಿ ಯುಥ್ ಸರ್ವಿಸ್ ಆಚರಣೆ
ಯುವಕರು ಮಧ್ಯಪಾನ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಬದುಕಿನ ದತ್ತ ಹೆಜ್ಜೆ ಹಾಕಲು ಸಂಗೀತ ಒಂದು ಉತ್ತಮ ಸಾಧನ ಎಂದು ಸುಕಿ ಸಂಗೀತ ತಂಡದ ಮುಖ್ಯಸ್ಥ ಕಿರಣ್ ಪಾಟೀಲ್ ನುಡಿದರು. ನಂತರ ಸಂಗೀತ ಕಾರ್ಯಕ್ರಮದಲ್ಲಿ ಕಿರಣ್ ಪಾಟೀಲ್ ಡಾ. ಎ ಎಸ್ ಭದ್ರಶೆಟ್ಟಿ , ಡಾ. ಸಚಿನ್ ದೇಶಪಾಂಡೆ ರೋಹಿಣಿ ಜಲ್ದೆ ಹಾಡು ಹಾಡಿದರು. ಸಭೆ ಅಧ್ಯಕ್ಷತೆ ಹೊನಗೊಂಟಿಕರ್ ವಹಿಸಿದರು.