ಚಂದ್ರಶೇಖರಪುರ ಸಂಸ್ಕೃತ ವೇದ ಪಾಠಶಾಲಾ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ
ಚಂದ್ರಶೇಖರಪುರ ಸಂಸ್ಕೃತ ವೇದ ಪಾಠಶಾಲಾ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ
ಚಂದ್ರಶೇಖರಪುರ ಸಂಸ್ಕೃತ
ವೇದಪಾಠಶಾಲೆಯು ಕೆ. ಆರ್. ಎಸ್. ಐ. ಪಿ. ಇ. ಎಮ್ ನ ಅಂಗ ಸಂಸ್ಥೆಯಾಗಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಂಸ್ಕೃತ ಮತ್ತು ವೇದ ಪಾಠವನ್ನು ಕಲಿಸುತ್ತಿದೆ. ಪಾಠಶಾಲಾವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬದ ವಿದ್ವಾನ್ ಡಾ. ಬಿ ಎಸ್ ಶೇಷಾದ್ರಿ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ
ಡಾ. ಎಸ್. ಗುರುಕಿರಣ್( ಶಸ್ತ್ರ ತಜ್ಞರು) ರವರು ಮಕ್ಕಳಿಗೆ, ಪೋಷಕರಿಗೆ, ಸಭಿಕರಿಗೆ ಇಂದಿನ ಸಮಾಜಕ್ಕೆ ಸಂಸ್ಕೃತ ಮತ್ತು ವೇದದ ಅವಶ್ಯಕತೆಯನ್ನು ಸರಳವಾಗಿ ತಿಳಿಸಿ, ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ಚಂದ್ರಶೇಖರ ಪುರದ ಪಾಠಶಾಲೆಯ ಮುಖ್ಯಸ್ಥರಾದ ಶ್ರೀಯುತ ಸತ್ಯನಾರಾಯಣ, ಅನೇಕ ವಿದ್ವಜ್ಜನರು, ಸಂಚಾಲಕರಾದ ಡಾ.ಜಿ. ಎಸ್. ಸುಧಾಕರ, ರಾಮಮಂದಿರದ ನಿರ್ದೇಶಕರು, ಅನುಶ್ರೀ ಬದರೀನಾಥ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.