logo

*ಜಾಗಿನಕೆರೆ ಡೈರಿ ನೂತನ ಅಧ್ಯಕ್ಷರಾಗಿ ಪಾಂಡುರಂಗ ಅವಿರೋಧವಾಗಿ ಆಯ್ಕೆ* ಕೆ.ಆರ್.ಪೇಟೆ:ತಾಲ್ಲೂಕಿನ ಸಂತೆಬಾಕಹಹಳ್ಳಿ ಜಾಗಿನಕೆರೆ ಹಾಲು ಉತ್ಪಾದ

*ಜಾಗಿನಕೆರೆ ಡೈರಿ ನೂತನ ಅಧ್ಯಕ್ಷರಾಗಿ ಪಾಂಡುರಂಗ ಅವಿರೋಧವಾಗಿ ಆಯ್ಕೆ*

ಕೆ.ಆರ್.ಪೇಟೆ:ತಾಲ್ಲೂಕಿನ ಸಂತೆಬಾಕಹಹಳ್ಳಿ ಜಾಗಿನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಾಗಿಕೆರೆ ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಹಿಂದಿನ ಅಧ್ಯಕ್ಷ ಕೃಷ್ಣಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ. ಪಾಂಡುರಂಗ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಿ.ಡಿ.ಓ ಭರತ್ ಕುಮಾರ್ ಘೋಷಣೆ ಮಾಡಿದರು ಸಹ ಚುನಾವಣೆ ಅಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಅಶೋಕ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಪಾಂಡುರಂಗ ಮಾತನಾಡಿ ನನ್ನನು ಜವಾಬ್ದಾರಿಯುತ ಅಧ್ಯಕ್ಷ ಸ್ಥಾನಕ್ಕೆ ಸಂಘದ ಸರ್ವ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಅಲಂಕರಿಸಿದ್ದೇನೆ.ಸಂಘದಲ್ಲಿ ಪ್ರತಿದಿನ 4000 ರಿಂದ 4,500 ಲೀಟರ್ ಹಾಲು ಸಂಗ್ರಹ ಆಗುತ್ತಿದೆ. 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರಹೊಂದಿದೆ. ಉತ್ಪಾದಕರಿಗೆ ಕಾಲಕಾಲಕ್ಕೇ ಹಣ ಬಟಾವಡೆ ಮಾಡಲಾಗುತ್ತಿದ್ದು ಜನಸ್ನೇಹಿಯಾಗಿ ಸಂಘ ಮುನ್ನಡೆಯುತ್ತಿರುವ ಸಂಘ ವನ್ನು ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಶ್ರಮವಹಿಸುತ್ತೆನೆ.ಸ್ಥಳೀಯ ರೈತರ ಜೀವನ ಮಟ್ಟ ಮತ್ತು ಅವರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ರೈತರು ಉತ್ತಮ ತಳಿಯ ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು ಎಂದರು.

ನೂತನ ಅಧ್ಯಕ್ಷರ ಘೋಷಣೆ ನಂತರ ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು, ಮುಖಂಡರು ನೂತನ ಅಧ್ಯಕ್ಷರನ್ನ ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಸಂತ ಲೋಕೇಶ್,ನಿರ್ದೇಶಕರಾದ ಕೃಷ್ಣಪ್ಪ,ಪುನೀತ್, ಕಾಂತರಾಜು ,ನಾರಾಯಣಗೌಡ, ಸತೀಶ್, ಚಂದ್ರಶೇಖರ, ಜೆ.ಡಿ ಹರೀಶ್,ರುದ್ರೇಶ್, ನಾಗರತ್ನ, ಮಂಜಮ್ಮ,ಪುನೀತ್,ಗ್ರಾಮದ ಮುಖಂಡರಾದ ಅಂಬರೀಷ್, ಬೋರೇಗೌಡ, ಕೃಷ್ಣ ನೀಲಣ್ಣ, ಸತೀಶ್, ರಮೇಶ್, ರೇವಣ್ಣ, ವಿಶ್ವನಾಥ್, ಕಾರ್ಯದರ್ಶಿ ಅಶೋಕ್,ಹಾಲು ಪರೀಕ್ಷಕ ಹರೀಶ್, ಸಹಾಯಕ ಸುಶೀಲಮ್ಮ ಸೇರಿದಂತೆ ಉಪಸ್ಥಿತರಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

0
12 views