logo

ಡಿಸೆಂಬರ್ 13 ರ 'ಲೋಕ ಅದಾಲತ್' ಸದುಪಯೋಗ ಪಡೆಸಿಕೊಳ್ಳಿ. ಅಥಣಿ : ಬರುವ ಡಿಸೆಂಬರ್ 13 ರಂದು ಅಥಣಿ ಕೋರ್ಟ್ ನಲ್ಲಿ 'ಲೋಕ ಅದಾಲತ್' ಇರುತ್ತದೆ ಅಂದು ಅನೇಕರು ತಮ್ಮ ವ್ಯಾಜ್ಯಗಳನ್ನು ಪ

ಡಿಸೆಂಬರ್ 13 ರ 'ಲೋಕ ಅದಾಲತ್' ಸದುಪಯೋಗ ಪಡೆಸಿಕೊಳ್ಳಿ.

ಅಥಣಿ : ಬರುವ ಡಿಸೆಂಬರ್ 13 ರಂದು ಅಥಣಿ ಕೋರ್ಟ್ ನಲ್ಲಿ 'ಲೋಕ ಅದಾಲತ್' ಇರುತ್ತದೆ ಅಂದು ಅನೇಕರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು ಇದರಿಂದ ಏಕಕಾಲಕ್ಕೆ ಕೇಸ್ ಬಗೆ ಹರಿಯುತ್ತದೆ ಹಾಗೂ ಶ್ರಮ, ದುಡ್ಡು ಕೂಡ ಉಳಿತಾಯ ಆಗುತ್ತದೆ ಎಂದು ನ್ಯಾಯಾಧೀಶ ಓಂಕಾರ ಮೂರ್ತಿ ಎಚ್ ಅವರು ಹೇಳಿದರು.

ಅವರು ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮದವರನ್ನು ಉದ್ದೇಶಸಿ ಮಾತನಾಡಿ ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಡಿಸೆಂಬರ್ 13 ರಂದು ಎಲ್ಲ ಕೋರ್ಟ್ ಗಳಲ್ಲಿ ಲೋಕ ಅದಾಲತ್ ಇರುತ್ತದೆ ಅಂದು ನ್ಯಾಯಾಲಯದಲ್ಲಿ ವಿಲೇ ಇರುವ ಸಿವ್ಹಿಲ್ ಸ್ವರೂಪ್ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹುದು, ರಾಜೀ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಕೂಡ ರಾಜಿ ಮಾಡಿಕೊಳ್ಳಬಹುದಾಗಿದೆ.

ಲೋಕ ಅದಾಲತ್ ನಲ್ಲಿ ಇತ್ಯರ್ಥ ಮಾಡಿಕೊಂಡ ಪ್ರಕರಣದ ವಿರುದ್ದ ಮೇಲ್ಮಣವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಟ್ರಾಫಿಕ್ ಹಾಗೂ ಆರ್ ಟಿ ಓ ಅವರು ವಿಧಿಸಿದ ದಂಡದ ಅರ್ಧ ಮೊತ್ತ ಮಾತ್ರ ಬಾಕಿ ಮಾಡಿದರೆ ಕೇಸು ಮುಕ್ತಾಯಮಾಡಬಹುದಾಗಿದೆ ಜೊತೆಗೆ ಇನ್ನೂ ಅನೇಕ ಅವಕಾಶಗಳು ಇರುವುದರಿಂದ ಎಲ್ಲರೂ ಈ ಅವಕಾಶ ಬಳಸಿಕೊಳ್ಳಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಕಾನೂನು ಸೇವಾ ಸಮೀತಿಯನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

2
2056 views