logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಕಾಗವಾಡ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ* *ಕಾಮಗಾರಿಗೆ ಚಾಲನೆ ನೀಡಿದ ಶಾಸಕ ರಾಜು ಅಣ್ಣಾ ಕಾಗೆ* *ವಾಯವ್ಯ­ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರು, ಬೆಳಗಾವಿ ಡಿಸ

*ಕಾಗವಾಡ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ*
*ಕಾಮಗಾರಿಗೆ ಚಾಲನೆ ನೀಡಿದ ಶಾಸಕ ರಾಜು ಅಣ್ಣಾ ಕಾಗೆ*
*ವಾಯವ್ಯ­ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರು, ಬೆಳಗಾವಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರು, ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜು ಅಣ್ಣಾ ಕಾಗೆ* ಅವರು ದಿ. 24-2-2026ರಂದು ಕಾಗವಾಡ ಮತಕ್ಷೇತ್ರದಲ್ಲಿ *ವಿವಿಧ ಅಭಿವೃದ್ಧಿ* *ಕಾಮಗಾರಿಗಳಿಗೆ ಭೂಮಿಪೂಜೆ* ನೆರವೇರಿಸಿದರು. ಅಥಣಿ ತಾಲೂಕಿನ ಸುಣ್ಣದಕೋಡಿಯಿಂದ ಚಿಕ್ಕಲಕಿ ಕ್ರಾಸ್ ರಾಜ್ಯ ಹೆದ್ದಾರಿ 20-175 (ರಾಜ್ಯ ಗಡಿಯಿಂದ ಮದಭಾವಿ-ಅಥಣಿ-ಕೋಕಟನೂರ-ಸಾವಳಗಿ ಜಿಲ್ಲಾ ಗಡಿವರೆಗೆ) ಕಿ. ಮೀ. ೦.೦೦ ರಿಂದ 5.೦೦ ರ ವರೆಗೆ ಅಂದಾಜು ಮೊತ್ತ ರೂ. 5.೦೦ ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ, ಅಥಣಿ ತಾಲೂಕಿನ ಗ್ರಾಮೀಣ ರಸ್ತೆಯಾದ ಮದಬಾವಿ-ಜಂಬಗಿ ರಸ್ತೆ ಕಿ.ಮೀ. ೦.೦೦ ರಿಂದ 2.50 ವರೆಗೆ ಅಂದಾಜು ಮೊತ್ತ ರೂ. 2.00 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, ಮದಬಾವಿ, ಕೆಂಪವಾಡ, ಶೇಡಬಾಳ ರೆಲ್ವೆ ಸ್ಟೇಶನ್ ಹಾಗೂ ಪಾಂಡೇಗಾಂವ (ಒಟ್ಟು 4 ಗ್ರಾಮಗಳಲ್ಲಿ) ಅಂದಾಜು ಮೊತ್ತ ರೂ. 2.50 ಕೋಟಿ ರೂ. ವೆಚ್ಚದಲ್ಲಿ ಆಯಷ್ಮಾನ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಮದಬಾವಿಯಲ್ಲಿ ಭೂಮಿಪೂಜೆ ನೆರವೇರಿಸಿದರು. ಹಣಮಾಪುರ ಕ್ರಾಸ್‌ನಲ್ಲಿ ಅಂದಾಜು ಮೊತ್ತ ರೂ. 2.೦೦ ಕೋಟಿ ರೂ. ವೆಚ್ಚದಲ್ಲಿ ಅಥಣಿ ತಾಲೂಕಿನ ಜಿ.ಮು.ರ. ಮುರಗುಂಡಿ-ಹಣಮಾಪೂರ-ಮದಭಾವಿ-ಬೊಮ್ಮನಾಳ-ಅರಳಿಹಟ್ಟಿ ರಸ್ತೆ ಕಿ.ಮೀ. 3.36 ರಿಂದ 6.೦೦ ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ, ಕಲ್ಲೂತ್ತಿ ಕ್ರಾಸ್‌ನಲ್ಲಿ ಅಂದಾಜು ಮೊತ್ತ ರೂ. 2.೦೦ ಕೋಟಿ ರೂ. ವೆಚ್ಚದಲ್ಲಿ ಅಥಣಿ ತಾಲೂಕಿನ ಅರಳಿಹಟ್ಟಿ- ಸಂಬರಗಿ-ಕಲ್ಲೂತಿ–ಜಂಬಗಿ ರಸ್ತೆ ಕಿ.ಮೀ. 6.೦೦ ರಿಂದ 1.೦೦ ವರೆಗೆ ಸುಧಾರಣೆ, ನಾಗನೂರ ಪಿ.ಎ. ಗ್ರಾಮದಲ್ಲಿ ಅಂದಾಜು ಮೊತ್ತ ರೂ. 4 ಕೋಟಿ ರೂ. ವೆಚ್ಚದಲ್ಲಿ ಅಥಣಿ ತಾಲೂಕಿನ ಜಿಲ್ಲಾ ಮುಖ್ಯ ರಸ್ತೆ ಗುಂಡೇವಾಡಿ-ಚಂದ್ರಪ್ಪವಾಡಿ ವ್ಹಾಯಾ ಕಿರಣಗಿ ರಸ್ತೆ (ತಾಂವಶಿ-ನಾಗನೂರ ಪಿ.ಎ. ಚಂದ್ರಪ್ಪವಾಡಿ) ಕಿ.ಮೀ. 7.೦೦ ರಿಂದ 8.90, 10.00 ರಿಂದ 13.00, 14.೦೦ ರಿಂದ 16.50 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

6
213 views

Comment