logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026 ಮಿತಿಗಳನ್ನು ಮೀರಿ ಓಡಿ! ಬೆಂಗಳೂರಿನ ಓಟಗಾರರ ಸಮೂಹವು ನಗರದ ಅತ್ಯಂತ ರೋಮಾಂಚಕ ಫಿಟ್ನೆಸ್ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಫ್ರೀಡಂ ಹೆಲ್ತಿ

ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026 – ಮಿತಿಗಳನ್ನು ಮೀರಿ ಓಡಿ!

ಬೆಂಗಳೂರಿನ ಓಟಗಾರರ ಸಮೂಹವು ನಗರದ ಅತ್ಯಂತ ರೋಮಾಂಚಕ ಫಿಟ್‌ನೆಸ್ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ‘ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್’ ಪ್ರಸ್ತುತಪಡಿಸುವ ‘ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026’ ಮೇ 24, 2026 ರಂದು ಮರುಳುತ್ತಿದ್ದು, ಈಗಾಗಲೇ 6000ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ!

ಬೆಂಗಳೂರಿನ ಐತಿಹಾಸಿಕ ನೈಸ್ ರಸ್ತೆ ಮಾರ್ಗದಲ್ಲಿ ನಡೆಯಲಿರುವ ಈ ಕ್ರೀಡಾಕೂಟವು ಅಥ್ಲೀಟ್‌ಗಳು, ಫಿಟ್‌ನೆಸ್ ಪ್ರೇಮಿಗಳು, ಕಾರ್ಪೊರೇಟ್ ತಂಡಗಳು, ರನ್ನಿಂಗ್ ಕ್ಲಬ್‌ಗಳು ಮತ್ತು ಮೊದಲ ಬಾರಿಗೆ ಭಾಗವಹಿಸುತ್ತಿರುವ ಓಟಗಾರರಿಗೆ ವಿಶ್ವದರ್ಜೆಯ ಅನುಭವವನ್ನು ನೀಡಲಿದೆ. ಸ್ಪರ್ಧಿಗಳು ವೃತ್ತಿಪರ ಟೈಮಿಂಗ್ ಹೊಂದಿರುವ 21.1 ಕಿ.ಮೀ ಹಾಫ್ ಮ್ಯಾರಥಾನ್, 10 ಕಿ.ಮೀ ಮತ್ತು 5 ಕಿ.ಮೀ ಓಟದ ವಿಭಾಗಗಳನ್ನು ಆಯ್ದುಕೊಳ್ಳಬಹುದಾಗಿದೆ.

‘ಕಲ್ಕಿ ಸ್ಪೋರ್ಟ್ಸ್ ಇಂಡಿಯಾ’ ಆಯೋಜಿಸಿರುವ FBHM 2026, ಪ್ರೀಮಿಯಂ ರೇಸ್-ಡೇ ಅನುಭವವನ್ನು ನೀಡುವ ಜೊತೆಗೆ ಫಿಟ್‌ನೆಸ್, ಸಹಿಷ್ಣುತೆ ಮತ್ತು ಸಮುದಾಯದ ಮನೋಭಾವವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಈ ಈವೆಂಟ್ ಕೇವಲ ಒಂದು ಓಟದ ಸ್ಪರ್ಧೆಯಷ್ಟೇ ಅಲ್ಲದೆ, ಸಂಪೂರ್ಣ ಫಿಟ್‌ನೆಸ್ ಮತ್ತು ಜೀವನಶೈಲಿಯ ಸಂಭ್ರಮಾಚರಣೆಯಾಗಿ ಮೂಡಿಬರಲಿದೆ.

ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಟೈಮ್ಡ್ ಬಿಬ್ ಪ್ರೀಮಿಯಂ ಡ್ರೈ-ಫಿಟ್ ಟಿ-ಶರ್ಟ್, ಫಿನಿಶರ್ಸ್ ಮೆಡಲ್, ಹೈಡ್ರೇಶನ್ ಸಪೋರ್ಟ್, ವೈದ್ಯಕೀಯ ನೆರವು, ರೇಸ್ ಗುಡೀಸ್ ಮತ್ತು ಓಟದ ನಂತರದ ಉಪಹಾರ ಸೇರಿದಂತೆ ಹಲವು ಆಕರ್ಷಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ವೃತ್ತಿಪರ ಮತ್ತು ಮರೆಯಲಾಗದ ಅನುಭವವನ್ನು ಖಚಿತಪಡಿಸಲಿದೆ.

ರೇಸ್ ದಿನಕ್ಕೂ ಮುನ್ನ, ಮೇ 22 ಮತ್ತು 23, 2026 ರಂದು ‘FBHM ಎಕ್ಸ್‌ಪೋ 2026’ನಡೆಯಲಿದ್ದು, ಇದು ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾಗಿರಲಿದೆ. ಇಲ್ಲಿ ರನ್ನರ್‌ಗಳು ತಮ್ಮ ರೇಸ್ ಕಿಟ್‌ಗಳನ್ನು ಸಂಗ್ರಹಿಸಬಹುದು ಮತ್ತು ಕಾರ್ಯಕ್ರಮದ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.

ರೇಸ್ ದಿನದಂದು ವಾರ್ಮ್-ಅಪ್ ಸೆಷನ್‌ಗಳು, ಲೈವ್ ಸ್ಟೇಜ್ ಕಾರ್ಯಕ್ರಮಗಳು, ಮಾರ್ಗದುದ್ದಕ್ಕೂ ಮನರಂಜನೆ, ಹೈಡ್ರೇಶನ್ ಸ್ಟೇಷನ್‌ಗಳು, ವೈದ್ಯಕೀಯ ಬೆಂಬಲ, ಸ್ವಯಂಸೇವಕರ ನೆರವು ಮತ್ತು ಅತ್ಯಾಧುನಿಕ ಫಿನಿಶ್-ಲೈನ್ ಅನುಭವದೊಂದಿಗೆ ಹೈ-ಎನರ್ಜಿ ವಾತಾವರಣ ಇರಲಿದೆ.

ಎಲ್ಲಾ ಓಟಗಾರರ ಸುರಕ್ಷಿತ ಮತ್ತು ಆನಂದದಾಯಕ ಅನುಭವಕ್ಕಾಗಿ ಓಟದ ಮಾರ್ಗದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಪೋರ್ಟ್ ಪಾಯಿಂಟ್‌ಗಳು, ಡಿಸ್ಟೆನ್ಸ್ ಮಾರ್ಕರ್‌ಗಳು, ರೂಟ್ ಬ್ರ್ಯಾಂಡಿಂಗ್ ಮತ್ತು ವಿವಿಧ ಆಕರ್ಷಣೆಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ದೇಶದಾದ್ಯಂತ ಕಾರ್ಪೊರೇಟ್‌ಗಳು, ಫಿಟ್‌ನೆಸ್ ಸಮುದಾಯಗಳು, ರನ್ನಿಂಗ್ ಕ್ಲಬ್‌ಗಳು ಮತ್ತು ವೈಯಕ್ತಿಕ ಓಟಗಾರರಿಂದ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ, ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026 ಬೆಂಗಳೂರಿನ ಪ್ರಮುಖ ಮತ್ತು ಹೆಮ್ಮೆಯ ಕ್ರೀಡಾಕೂಟವಾಗಿ ವೇಗವಾಗಿ ಹೊರಹೊಮ್ಮುತ್ತಿದೆ.
*Freedom Bengaluru Half Marathon 2026 – Run Beyond Limits!*

Bengaluru’s running community is gearing up for one of the city’s most exciting fitness celebrations as the Freedom Bengaluru Half Marathon 2026, presented by Freedom Healthy Cooking Oil, returns on 24th May 2026 with 6000+ participants and counting!

Set against the iconic NICE Road stretch, the event promises a world-class running experience for athletes, fitness enthusiasts, corporate teams, running communities, and first-time runners alike. Participants can choose from professionally timed race categories including 21.1K Half Marathon, 10K, and 5K runs.
Organised by Kalki Sports India, FBHM 2026 aims to bring together the spirit of fitness, endurance, and community while delivering a premium race-day experience. The event is envisioned not just as a race but as a complete fitness and lifestyle celebration.

Participants will receive exciting race-day benefits including a timed BIB, premium dry-fit T-shirt, finisher’s medal, hydration support, medical assistance, race goodies, and post-run refreshments, ensuring a memorable and professionally managed experience.

On race day, participants can expect a high-energy atmosphere with warm-up sessions, live stage engagement, route entertainment, hydration stations, medical support, volunteer assistance, and a premium finish-line experience.

The race route will include strategically placed support points, distance markers, route branding, and participant engagement elements to ensure a safe and enjoyable experience for all runners.
With enthusiastic participation from corporates, fitness communities, running clubs, and individual runners across the country, Freedom Bengaluru Half Marathon 2026 is rapidly establishing itself as one of Bengaluru’s marquee running properties.

Race Day Venue: NICE Tollgate, Hosakerehalli
Event Date: 24th May 2026
Time: 5:45 AM
Categories: 21.1K | 10K | 5K
6000+ Participants & Counting

Freedom Bengaluru Half Marathon 2026 — Run Beyond Limits

10
69 views

Comment